Saturday, July 27, 2024
Homeಸುದ್ದಿಚಂದ್ರನ ಸನಿಹ ತಲುಪಿದ ವಿಕ್ರಮ್ ಲ್ಯಾಂಡರ್; 'ಇಸ್ರೋ ಚಂದ್ರ ಕ್ರಾಂತಿ' ಮತ್ತೊಂದು ಮೈಲಿಗಲ್ಲು ತಲುಪಲು ಕ್ಷಣಗಣನೆ..!!

ಚಂದ್ರನ ಸನಿಹ ತಲುಪಿದ ವಿಕ್ರಮ್ ಲ್ಯಾಂಡರ್; ‘ಇಸ್ರೋ ಚಂದ್ರ ಕ್ರಾಂತಿ’ ಮತ್ತೊಂದು ಮೈಲಿಗಲ್ಲು ತಲುಪಲು ಕ್ಷಣಗಣನೆ..!!

ಇಸ್ರೋ ಮತ್ತೊಂದು ಮೈಲಿಗಲ್ಲು ತಲುಪಲು ಕ್ಷಣಗಣನೆ ಶುರುವಾಗಿದೆ. ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನಂಗಳಕ್ಕೆ ತಲುಪುವ ವಿಶ್ವಾಸ ಇಮ್ಮಡಿಸಿದೆ. ಈ ನಡುವೆ ಭಾರತಕ್ಕೂ ಮೊದಲೇ ಚಂದ್ರನ ಅಂಗಳ ತಲುಪಲು ಹೊರಟಿದ್ದ ರಷ್ಯಾಗೆ ಹಿನ್ನಡೆಯಾಗಿದೆ. ಚಂದ್ರನ ದಕ್ಷಿಣಧ್ರುವ ತಲುಪಿದ ಮೊದಲ ದೇಶ ಎನಿಸಿಕೊಳ್ಳಲು ಭಾರತ ಕಾತರಗೊಂಡಿದೆ. ಇಸ್ರೋದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3ಅನ್ನು ಜುಲೈ 14ರಂದು ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗುವ ಅಮೃತಘಳಿಗೆಗೆ ಕ್ಷಣಗಣನೆ ಆರಂಭ ಆಗಿದೆ. ಇಡೀ ವಿಶ್ವವೇ ಇಸ್ರೋದ ಸಾಧನೆ ನೋಡಲು ಕಾತರಗೊಂಡಿದೆ.

ಚಂದ್ರನ ದಾರಿ ಹುಡುಕುತ್ತಾ ಸಾಗಿದ್ದ ಭಾರತದ ಗಗನನೌಕೆ ಚಂದ್ರಯಾನ-3 ಇನ್ನೇನು ತನ್ನ ಗುರಿ ತಲುಪುವುದರಲ್ಲಿದೆ. ಶತಕೋಟಿ ಭಾರತೀಯರ ಕನಸಿನ ಕೂಸಾಗಿದ್ದ ಚಂದ್ರಯಾನ-3 ಬಹುತೇಕ ಚಂದ್ರನ ಮೇಲ್ಮೈ ಸಮೀಪಕ್ಕೆ ತೆರಳಿದೆ.

ಚಂದ್ರನ ಮೇಲ್ಮೈಗೆ ಲ್ಯಾಂಡರ್ ಇಳಿಸುವುದಕ್ಕಾಗಿ ಅದರ ವೇಗ ತಗ್ಗಿಸಲು ನಡೆಸಿರುವ ಕೊನೆಯ ಡಿ-ಬೂಸ್ಟಿಂಗ್‌ ಕಾರ್ಯ ಸಕ್ಸಸ್ ಆಗಿದೆ. ಭಾರತದ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಬಹುತೇಕ ಸಮೀಪದಲ್ಲೇ ಹಾರಾಡುತ್ತಿದೆ. ಲ್ಯಾಂಡರ್‌ನ ವೇಗ ತಗ್ಗಿಸುವ ಪ್ರಕ್ರಿಯೆ ಇಂದು ಬೆಳಗ್ಗೆ ಯಶಸ್ವಿಯಾಗಿ ಪೂರ್ಣಗೊಂಡ ಬೆನ್ನಲ್ಲೇ ಇಸ್ರೋ ತನ್ನ ನೌಕೆ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡಿಂಗ್ ಆಗುವ ದಿನಾಂಕ ಘೋಷಣೆ ಮಾಡಿದೆ. ಮೊನ್ನೆ ಆಗಸ್ಟ್ 18ರಂದು ಮೊದಲ ಡಿ-ಬೂಸ್ಟಿಂಗ್ ಕಾರ್ಯ ನಡೆದಿತ್ತು.

ಸದ್ಯ ಭಾರತದ ವಿಕ್ರಮ್ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪ ಇರುವ 134 ಕಿಮೀ ದೂರದ ಕಕ್ಷೆ ತಲುಪಿದೆ. ಈ ಕಕ್ಷೆಯಿಂದಲೇ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡಿಂಗ್‌ಗೆ ಇಸ್ರೋ ಪ್ರಯತ್ನಿಸಲಿದೆ. 25 ಕಿಲೋ ಮೀಟರ್ x 134 ಕಿಲೋ ಮೀಟರ್ ಕಕ್ಷೆ ಚಂದ್ರನ ಸಮೀಪದ ಕಕ್ಷೆಯಾಗಿದ್ದು ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆಗಸ್ಟ್ 23ರಂದು ನಡೆಯಲಿದೆ. ಹೀಗಾಗಿ ಇಡೀ ಜಗತ್ತು ಭಾರತದ ಕಡೆ ಕಣ್ಣಿಟ್ಟು ಕಾಯುತ್ತಿದೆ.

ಈ ಬಾರಿಯ ಚಂದ್ರಯಾನ-3ಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು ಚಂದ್ರಯಾನ-3 ಅತ್ಯಾಧುನಿಕವಾದ ತಂತ್ರಜ್ಞಾನ ಹೊಂದಿದ್ದು ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ ಕೂಡ ಹೈಫೈ ಆಗಿದೆ. ಸರಿಯಾದ ಹಾಗೂ ಸಮತಟ್ಟು ಜಾಗದಲ್ಲಿ ಲ್ಯಾಂಡಿಂಗ್ ಹುಡುಕಲು ಸಹಾಯ ಮಾಡಲಿದೆ. ಈಗಾಗಲೇ ನೌಕೆಯ ಲ್ಯಾಂಡರ್ ವೇಗವನ್ನು ಇಸ್ರೋ ತಗ್ಗಿಸಿದೆ. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ನೌಕೆ ಸಾಫ್ಟ್ ಲ್ಯಾಂಡ್ ಆಗಲಿದೆ. ಕ್ಯಾಮೆರಾದಲ್ಲಿ ನೌಕೆ ಇಳಿಯುವುದನ್ನು ಗಮನಸಿಸಬಹುದಾಗಿದೆ. ಇನ್ನು ಚಂದ್ರಯಾನ-2 ಲ್ಯಾಂಡಿಂಗ್​ ಕಾರ್ಯ ಕೊನೆಯ 20 ನಿಮಿಷಗಳ ಕಾರ್ಯಾಚರಣೆ ವೇಳೆ ವಿಫಲವಾಗಿತ್ತು. ಆದ್ರೆ ಈ ಬಾರಿ ಚಂದ್ರಯಾನ-3ನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಎಲ್ಲಾ ನಿಗಾ ವಹಿಸಲಾಗಿದೆ ಅಂತ ಇಸ್ರೋದ ಡೆಪ್ಯೂಟಿ ಡೈರೆಕ್ಟರ್ ಎಸ್.ವಿ.ಶರ್ಮಾ ಹೇಳಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News