ಮಾಲಿವುಡ್ ನಟಿ ಅಹಾನಾ ಕೃಷ್ಣ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದು ವೈರಲ್ ಆಗಿದೆ. ನೇರಳೆ ಬಣ್ಣದ ಸೀರೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ದೇಸಿ ಡೈರಿ ಮಿಲ್ಕ್
ಡೈರಿ ಮಿಲ್ಕ್ ಚಾಕೊಲೇಟ್ ಕವರ್ ನ ಬಣ್ಣದ ಸೀರೆಯನ್ನು ಧರಿಸಿರುವ ಅಹನಾ ಈ ಫೋಟೋಗಳಿಗೆ ‘ನಾನು ದೇಸಿ ಡೈರಿ ಮಿಲ್ಕ್’ ಎಂದು ಬರೆದುಕೊಂಡಿದ್ದು ಗಮನ ಸೆಳೆದಿದೆ.
ದುಬಾರಿ ಸೀರೆ
ಇನ್ನು ಅಹನಾ ಧರಿಸಿರುವ ಸೀರೆ ಬಗ್ಗೆ ಹೇಳಲೇಬೇಕು. ಯಾಕೆಂದರೆ ಡಿಸೈನರ್ ರೂಪಿಸಿರುವ ಈ ಸೀರೆಯ ಬೆಲೆ ಬರೋಬ್ಬರಿ 53 ಸಾವಿರ ರೂ. ಎನ್ನಲಾಗಿದೆ. ಪ್ಲದೀಕ್ಷ್ ಮಾಧುರಿ ಡಿಸೈನರ್ ಸೀರೆ ಇದಾಗಿದೆ. ಅಹಾನಾ ಈ ಫೋಟೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಮಲೆಯಾಳಂನ ಹಿರಿಯ ನಟ ಕೃಷ್ಣ ಕುಮಾರ್ ಮತ್ತು ಸಿಂಧು ಕೃಷ್ಣ ದಂಪತಿಯ ಹಿರಿಯ ಪುತ್ರಿ ಅಹನಾ 2014ರಲ್ಲಿ ‘ನಾನ್ ಸ್ಟೀವ್ ಲಾಪ್ಜ್’ ಮಲೆಯಾಳಂ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ್ದರು. ಇದುವರೆಗೆ ಮಲೆಯಾಳಂನ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಯೂಟ್ಯೂಬ್ ಮತ್ತು ಇಸ್ಟಾಗ್ರಾಮ್ ನಲ್ಲಿ ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.