Saturday, May 4, 2024
Homeಸುದ್ದಿಹೆಬ್ರಿ: ಓವರ್ ಟೇಕ್ ಮಾಡುವಾಗ ಭೀಕರ ಅಪಘಾತ - ನಾಲ್ವರಿಗೆ ಗಾಯ

ಹೆಬ್ರಿ: ಓವರ್ ಟೇಕ್ ಮಾಡುವಾಗ ಭೀಕರ ಅಪಘಾತ – ನಾಲ್ವರಿಗೆ ಗಾಯ

ಹೆಬ್ರಿ, ಆ.19: ಹೆಬ್ರಿಯ ನಾಡ್ಪಾಲು ಜಕ್ಕನಮಕ್ಕಿ ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಗಾಯಗೊಂಡಿದ್ದಾರೆ. ಓವರ್ ಟೆಕ್ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.

ಬೈಕ್‌ ಅನ್ನು ಕಾರೊಂದು ಓವರ್ ಟೇಕ್ ಮಾಡುವಾಗ ಮುಂದಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸುಮಾರು ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಕಾರುಗಳು ಹಾಗೂ ಬೈಕ್ ನುಜ್ಜುಗುಜ್ಜಾಗಿವೆ. ಸ್ಥಳಕ್ಕೆ ಹೆಬ್ರಿ ಪಿಎಸ್ಐ ಮಹೇಶ್‌ ಟಿಎಂ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ. ಅಪಘಾತದಿಂದ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News