Saturday, July 27, 2024
Homeಸುದ್ದಿರಾಜ್ಯಇಂದಿನಿಂದ ಮದ್ಯದ ರೇಟ್ ಹೆಚ್ಚಳ.. ಒಲ್ಡ್ ಮೊಂಕ್, ವೋಡ್ಕಾ ರೇಟ್ ಕೇಳೋದೆ ಬೇಡ : ಎಷ್ಟೆಷ್ಟಿದೆ..!!?

ಇಂದಿನಿಂದ ಮದ್ಯದ ರೇಟ್ ಹೆಚ್ಚಳ.. ಒಲ್ಡ್ ಮೊಂಕ್, ವೋಡ್ಕಾ ರೇಟ್ ಕೇಳೋದೆ ಬೇಡ : ಎಷ್ಟೆಷ್ಟಿದೆ..!!?

ರಾಜ್ಯ ಸರ್ಕಾರ ಈ ಬಾರಿ ಅಬಕಾರಿ ಇಲಾಖೆಯ ಮೇಲೆ ಕಣ್ಣಿಟ್ಟಿದೆ. ಹಾಗಾಗಿ ಬಜೆಟ್ನಲ್ಲಿ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಈ ಕಾರಣಕ್ಕೆ ಮದ್ಯದಬೆಲೆಯಲ್ಲಿ ಏರಿಕೆ ಕಂಡಿದೆ. ಇದೀಗ ರಾಜ್ಯ ಸರ್ಕಾರ ಹೊರಡಿಸಿದಂತೆ ಇಂದಿನಿಂದ ಮದ್ಯ ದುಬಾರಿಯಾಗಲಿದ್ದು, ಬಿಯರ್ ಬೆಲೆ 10% ಮತ್ತು ಇತರ ಮದ್ಯಗಳ ಬೆಲೆ 20%ನಷ್ಟು ಏರಿಕೆ ಕಂಡಿದೆ. ಅಂದಹಾಗೆಯೇ ಯಾವೆಲ್ಲಾ ಬ್ರ್ಯಾಂಡ್ ಎಷ್ಟು ರೇಟ್ ಹೊಂದಿದೆ ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಇಲ್ಲಿದೆ ಕೆಲವೊಂದು ಮದ್ಯದ ರೇಟ್ ?

1. ಹೈವಾಟ್ಸ್ ಪಂಚ್
ಹಿಂದಿನ ಬೆಲೆ – ₹70
ಇಂದಿನ ಬೆಲ -₹80

2. ಬಡ್ ವೈಸರ್ ಮ್ಯಾಗ್ನಂ
ಹಿಂದಿನ ಬೆಲೆ – ₹220
ಇಂದಿನ ಬೆಲೆ – ₹240

3. ಕೆಎಫ್ ಪ್ರಿಮಿಯಂ
ಹಿಂದಿನ ಬೆಲೆ – ₹170
ಇಂದಿನ ಬೆಲೆ -₹190

4. ಬಿಪಿ(180 ಎಂಎಲ್)
ಹಿಂದಿನ ಬೆಲೆ – 106
ಇಂದಿನ ಬೆಲೆ – 120

5. ಬ್ಲಾಕ್ ಆ್ಯಂಡ್ ವೈಟ್ (ಫುಲ್)
ಹಿಂದಿನ ಬೆಲೆ – ₹2464
ಇಂದಿನ ಬೆಲೆ – ₹2800

6. ಒಲ್ಡ್ ಮಾಂಕ್
ಹಿಂದಿನ ಬೆಲೆ – ₹137 ಏರಿಕೆ
ಇಂದಿನ ಬೆಲೆ- ₹155

7. ಎಂಹೆಚ್(180 ಎಂಎಲ್)
ಹಿಂದಿನ ಬೆಲೆ – ₹220
ಇಂದಿನ ಬೆಲೆ- ₹240

8. ಎಂಸಿ ಬ್ರಾಂಡಿ
ಹಿಂದಿನ ಬೆಲೆ – ₹170
ಇಂದಿನ ಬೆಲೆ – ₹190

9. ಐಬಿ
ಹಿಂದಿನ ಬೆಲೆ – ₹220
ಇಂದಿನ ಬೆಲೆ – ₹240

1೦. ಒಟಿ
ಹಿಂದಿನ ಬೆಲೆ – ₹87
ಇಂದಿನ ಬೆಲೆ – ₹100

11. ಜಾನಿ ವಾಕರ್ ಬ್ಲಾಕ್ ಲೇಬಲ್
ಹಿಂದಿನ ಬೆಲೆ – ₹6250
ಇಂದಿನ ಬೆಲೆ – ₹7150

12. ಚಿವಾಸ್ ರೀಗಲ್
ಹಿಂದಿನ ಬೆಲೆ – ₹6200
ಇಂದಿನಿ ಬೆಲೆ – ₹7000

13. ರೋಮನ್ ವೋಡ್ಕಾ –
ಹಿಂದಿನ ಬೆಲೆ – 915
ಇಂದಿನ ಬೆಲೆ – 1000

14. ಮ್ಯಾಜಿಕ್ ಮೊಮೆಂಟ್
ಹಿಂದಿನ ಬೆಲೆ – 330
ಇಂದಿನ ಬೆಲೆ – 380

ಅಂದಹಾಗೆಯೇ ಇಂದಿನಿಂದ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಈ ಹಿಂದೆ‌ ಮದ್ಯ ಮಾರಾಟದಿಂದ‌ ಒಂದು ದಿನಕ್ಕೆ 80 ಕೋಟಿ ಆದಾಯ ಸಂಗ್ರಹವಾಗ್ತಿತ್ತು. ಈಗ‌ ದರ ಏರಿಕೆಯಿಂದ‌ ದಿನಕ್ಕೆ 100 ಕೋಟಿ ಆದಾಯ ಸಂಗ್ರಹದವಾಗುವ ನಿರೀಕ್ಷೆ ಇದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News