Wednesday, September 18, 2024
Homeಸುದ್ದಿಹಣ್ಣಿನ ವ್ಯಾಪಾರಿಯ ಪುತ್ರ 300 ಕೋಟಿ ರೂ. ಉದ್ಯಮ ಕಟ್ಟಿ ಬೆಳೆಸಿದರು...!!

ಹಣ್ಣಿನ ವ್ಯಾಪಾರಿಯ ಪುತ್ರ 300 ಕೋಟಿ ರೂ. ಉದ್ಯಮ ಕಟ್ಟಿ ಬೆಳೆಸಿದರು…!!

ಮುಂಬೈ, ಸೆ 25: ಒಂದು ವ್ಯವಹಾರವನ್ನು ಸ್ಥಾಪಿಸಿ ತಕ್ಕಮಟ್ಟಿಗೆ ಹಿಡಿದು ನಿಲ್ಲಿಸುವುದೇ ದೊಡ್ಡ ಸಾಹಸ. ಕಷ್ಟಗಳಿಗೆ ಜಗ್ಗದೇ ಶ್ರಮಪಟ್ಟು ವ್ಯವಹಾರ ಯಶಸ್ಸು ಮಾಡಿದವರಲ್ಲಿ ಕರ್ನಾಟಕದ ರಘುನಂದನ್ ಶ್ರೀನಿವಾಸ್ ಕಾಮತ್ ಕೂಡ ಒಬ್ಬರು. ಮಂಗಳೂರಿನಲ್ಲಿ ಅಪ್ಪನ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಬೆಳೆದ ಇವರು ಇದೀಗ 300 ಕೋಟಿ ರೂ ಮೌಲ್ಯದ ಐಸ್ಕ್ರೀಮ್ ಬ್ರ್ಯಾಂಡ್ನ ಒಡೆಯರಾಗಿದ್ದಾರೆ.ಇವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ರಘುನಂದನ್ ಎಸ್ ಕಾಮತ್ ತಂದೆ ಮಂಗಳೂರಿನಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದರು. ತಂದೆಯೊಂದಿಗೆ ಅಂಗಡಿಯಲ್ಲಿ ಹೆಚ್ಚು ಸಮಯ ಕಳೆಯುವ ಸಂದರ್ಭದಲ್ಲಿ ಹಣ್ಣು ಬಗ್ಗೆ ಅವುಗಳ ಗುಣಮಟ್ಟದ ಬಗ್ಗೆ ಅರಿತುಕೊಂಡರು. ಎಂಬತ್ತರ ದಶಕದಲ್ಲಿ ಮುಂಬೈಗೆ ತೆರಳಿದರು.

ಮಂಗಳೂರಿನಿಂದ ಮುಂಬೈಗೆ ಹೋದ ಕಾಮತ್ ಫೆಬ್ರವರಿ 14, 1984 ರಂದು, ತಮ್ಮ ಮೊದಲ ಐಸ್ ಕ್ರೀಮ್ ವ್ಯಾಪಾರವಾದ ನ್ಯಾಚುರಲ್ಸ್ ಅನ್ನು ಪರಿಚಯಿಸಿದರು ಮತ್ತು ಮುಂಬೈನ ಜುಹುದಲ್ಲಿ ಅಂಗಡಿಯನ್ನು ಸ್ಥಾಪಿಸಿದರು.

ಆಗ ಇವರ ಅಂಗಡಿಯಲ್ಲಿ ಕೆಲಸಕ್ಕಿದ್ದವರು 4 ಮಂದಿ ಮಾತ್ರ. ಕಾಮತ್ ಹಾಗೂ ಸಿಬ್ಬಂದಿಯೇ ಸೇರಿ ಐಸ್ ಕ್ರೀಮ್​ಗಳನ್ನು ತಯಾರಿಸುತ್ತಿದ್ದರು. ನ್ಯಾಚುರಲ್ಸ್ ಐಸ್ ಕ್ರೀಮ್ ಅಂಗಡಿಯಲ್ಲಿ 10 ಫ್ಲೇವರ್​ಗಳ ಐಸ್ ಕ್ರೀಮ್ ತಯಾರಾಗುತ್ತಿತ್ತು. ನೈಸರ್ಗಿಕ ಐಸ್ ಕ್ರೀಂ ತಯಾರಿಸುತ್ತಿದ್ದರೂ ನಿರೀಕ್ಷಿಸಿದಷ್ಟು ವ್ಯಾಪಾರ ಆಗುತ್ತಿರಲಿಲ್ಲ. ಗ್ರಾಹಕರನ್ನು ಸೆಳೆಯಲು ರಘುನಂದನ್

ಶ್ರೀನಿವಾಸ್ ಕಾಮತ್ ಅವರು ಪಾವ್ ಬಾಜಿ ತಿಂಡಿಯನ್ನು ಮೆನು ಲಿಸ್ಟ್​ಗೆ ಹಾಕಿದರು.
ಪಾವ್ ಬಾಜಿಯನ್ನೇ ಪ್ರಧಾನ ತಿಂಡಿಯಾಗಿ ಮಾಡಿ, ಅದರ ನೆರಳಿನಲ್ಲಿ ಐಸ್ ಕ್ರೀಮ್ ಅನ್ನೂ ಸೇಲ್ ಮಾಡತೊಡಗಿದರು. ಪಾವ್ ಬಾಜಿ, ಐಸ್ ಕ್ರೀಮ್ ಕಾಂಬಿನೇಶ್ ವರ್ಕೌಟ್ ಆಯಿತು. ಜನರಿಗೆ ಇವರ ಐಸ್ ಕ್ರೀಮ್ ಇಷ್ಟವಾಗ ತೊಡಗಿತು.

ಜುಹುವಿನ ಕೋಳಿವಾಡ ನೆರೆಹೊರೆಯಲ್ಲಿನ ಅವರ ಸಾಧಾರಣ 200-ಚದರ ಅಡಿ ಅಂಗಡಿಯಿಂದ, ಕಾಮತ್ ತನ್ನ ಕಾರ್ಯಾಚರಣೆಯ ಮೊದಲ ವರ್ಷದಲ್ಲಿ ರೂ 5,00,000 ಆದಾಯವನ್ನು ಗಳಿಸಿದರು. ಒಂದು ವರ್ಷದ ನಂತರ, ಅವರು ಸಂಪೂರ್ಣ ಐಸ್ ಕ್ರೀಮ್ ಬ್ರಾಂಡ್ ಅನ್ನು ಅಭಿವೃದ್ಧಿಪಡಿಸುವ ಸಲುವಾಗಿ ಪಾವ್ ಭಾಜಿ ಮಾರಾಟವನ್ನು ತೊರೆದರು.

ಕಾಮತ್ ಒಡೆತನದ ಆರು-ಟೇಬಲ್ ರೆಸ್ಟೊರೆಂಟ್ ಪ್ರಸ್ತುತ ಐದು ವಿಭಿನ್ನ ರುಚಿಯ ಫ್ರೋಜನ್ ಫ್ರೂಟ್ ಐಸ್ ಕ್ರೀಂ ಅನ್ನು ಒದಗಿಸುತ್ತದೆ. ಇದು ಸ್ಟ್ರಾಬೆರಿ, ಮಾವು, ಚಾಕೊಲೇಟ್, ಗೋಡಂಬಿ ಒಣದ್ರಾಕ್ಷಿ ಮತ್ತು ಸೀತಾಫಲ ರುಚಿಯ ಐಸ್ ಕ್ರೀಮ್ ಸುವಾಸನೆಯನ್ನು ಹೊಂದಿತ್ತು.

ನ್ಯಾಚುರಲ್ಸ್ ಐಸ್ ಕ್ರೀಂನ 135 ಕ್ಕೂ ಹೆಚ್ಚು ಸ್ಥಳಗಳು ಈಗ ರಾಷ್ಟ್ರದಾದ್ಯಂತ ಅಸ್ತಿತ್ವದಲ್ಲಿವೆ. ಈ ಮಳಿಗೆಗಳು ಹಲಸು, ಹಸಿ ತೆಂಗಿನಕಾಯಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 20 ವಿವಿಧ ರುಚಿಗಳಲ್ಲಿ ಐಸ್ ಕ್ರೀಮ್ ಅನ್ನು ಮಾರಾಟ ಮಾಡುತ್ತವೆ.ಕಾಮತ್ ಅವರ ಈ ಐಸ್ ಕ್ರೀಮ್ ಪಾರ್ಲರ್ ವರ್ಷಕ್ಕೆ 300 ಕೊಟಿ ವಹಿವಾಟು ನಡೆಸುತ್ತದೆ. ಅಮುಲ್, ನಂದಿನಿ, ಅರುಣ್ಸ್ ಇತ್ಯಾದಿ ಪ್ರಬಲ ಬ್ರ್ಯಾಂಡ್​ಗಳ ಎದುರು ಪೈಪೋಟಿ ನಡೆಸಿ ನ್ಯಾಚುರಲ್ಸ್ ಬ್ರ್ಯಾಂಡ್​ಗೆ ಇಷ್ಟು ವ್ಯವಹಾರ ಸಿಗುತ್ತಿರುವುದು ಗಮನಾರ್ಹ ಸಂಗತಿ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News