Monday, May 27, 2024
Homeಸುದ್ದಿಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಡಬಲ್ ಮರ್ಡರ್..!!!

ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಡಬಲ್ ಮರ್ಡರ್..!!!

ಬೆಂಗಳೂರು, ಜು.12: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಡಬಲ್ ಮರ್ಡರ್ ಆಗಿದೆ. ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಫಣೀಂದ್ರ ಸುಬ್ರಹ್ಮಣ್ಯ, ಸಿಇಒ ವಿನು ಕುಮಾರ್ ಎಂಬುವರು ಕೊಲೆಯಾದ ದುರ್ದೈವಿಗಳು.

ನಗರದ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಮರ್ಡರ್​ ಆಗಿದ್ದು, ಫಿಲಿಕ್ಸ್​ ಎಂಬಾತನಿಂದ ಕೊಲೆ ನಡೆದಿದೆ ಎನ್ನಲಾಗಿದೆ. ಫಿಲಿಕ್ಸ್​​​​ ​​​​​ ಮೀಡಿಯಾ ಪ್ರೈವೇಟ್​​ ಲಿಮಿಟೆಡ್ ಕಂಪನಿಯ ಮಾಜಿ ಉದ್ಯೋಗಿ.

ಕೆಲವು ದಿನಗಳ ಹಿಂದೆ ಕೆಲಸಕ್ಕೆ ರಿಸೈನ್​ ಮಾಡಿದ್ದ ಫಿಲಿಕ್ಸ್​​ ತನ್ನದೇ ಹೊಸ ಕಂಪನಿ ಶುರು ಮಾಡಿದ್ದ. ತನ್ನ ಬ್ಯುಸಿನೆಸ್​​ಗೆ ಫಣೀಂದ್ರ, ವಿನು ಕುಮಾರ್​​ ಅಡ್ಡ ಬರುತ್ತಾರೆ ಎಂದು ಇಬ್ಬರ ಕೊಲೆಗೆ ಸ್ಕೆಚ್​ ಹಾಕಿದ್ದ. ಅದರಂತೆಯೇ ಇಂದು ಸಂಜೆ ಏರೋನಿಕ್ಸ್​​​​​ ಮೀಡಿಯಾ ಪ್ರೈವೇಟ್​​ ಲಿಮಿಟೆಡ್ ಕಂಪನಿ ಕಚೇರಿಗೆ ನುಗ್ಗಿದ ಫಿಲಿಕ್ಸ್​​​ ಫಣೀಂದ್ರ, ವಿನು ಕುಮಾರ್​​ ಮೇಲೆ ತಲ್ವಾರ್​ನಿಂದ ದಾಳಿ ನಡೆಸಿ ಕೊಂದು ಎಸ್ಕೇಪ್​ ಆಗಿದ್ದಾನೆ.

ಸದ್ಯ ಘಟನಾ ಸ್ಥಳಕ್ಕೆ ಅಮೃತಹಳ್ಳಿ ಠಾಣಾ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಹಂತಕ ಫಿಲಿಕ್ಸ್​​ ಬಂಧನಕ್ಕೆ ಬಲೆ ಬೀಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News