ಕೋಟ: ಪಡುಕರೆಯಲ್ಲಿ ಮೀನುಗಾರಿಕಾ ಬೋಟ್ ದಡಕ್ಕಪ್ಪಳಿಸಿ ಅಪಾರ ಹಾನಿ

ಕೋಟ, ಮೇ.25: ಇಲ್ಲಿನ ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಪಾರಂಪಳ್ಳಿ ಪಡುಕರೆ ಕಡಲ ಕಿನಾರೆಯಲ್ಲಿ ಮೀನುಗಾರಿಕೆ ತೆರಳಿದ ಬೋಟ್‍ವೊಂದು ದಡಕ್ಕೆ ಅಪ್ಪಳಿಸಿ ಅಪಾರ ಹಾನಿ ಉಂಟಾದ ಘಟನೆ ಬುಧವಾರ ಸಂಜೆ ನಡೆದಿದೆ.

ಬೆಂಗ್ರೆ ನಿವಾಸಿ ಸಂದೀಪ್ ತೋಳಾರ್ ಮಾಲೀಕತ್ವದ ಶ್ರೀ ದುರ್ಗಾಪರಮೇಶ್ವರಿ ರುಕ್ಮಯ್ಯ ಹೆಸರಿನ ಬೋಟ್‍ನ ಪ್ಯಾನಿಗೆ ಬಲೆ ಸಿಲುಕಿದ ಪರಿಣಾಮ ಬೋಟ್‍ನ ಇಂಜಿನ್ ಸ್ತಬ್ದಗೊಂಡಿತ್ತು. ಅಕ್ಕಪಕ್ಕದ ಬೋಟ್‍ಗಳು ಸಹಾಯಕ್ಕೆ ಬಂದರೂ ಕೂಡ ಪ್ರಯೋಜನವಾಗದೆ ಗಾಳಿಯ ರಭಸಕ್ಕೆ ದಡಕ್ಕೆ ತೇಲಿಬಂದಿದೆ.

ಬೋಟಿನಲ್ಲಿದ್ದ ಕಾರ್ಮಿಕರನ್ನ ಸುರಕ್ಷಿತವಾಗಿ ಬೇರೆ ಬೋಟಿನವರು ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಹಾಗೂ ಮೀನುಗಾರಿಕೆ ಪರಿಕರಗಳು ಬೋಟಿನೊಂದಿಗೆ ಮುಳುಗಡೆಯಾಗಿದ್ದು ಸುಮಾರು ಅಂದಾಜು 12 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

You cannot copy content from Baravanige News

Scroll to Top