ಶಿರ್ವದಲ್ಲಿ ಬೀದಿ ನಾಯಿಗಳ ಹಾವಳಿ – ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವನಿಗೆ ಕಚ್ಚಿದ ನಾಯಿ!

ಶಿರ್ವ: ಶಿರ್ವದಲ್ಲಿ ರಾತ್ರಿ ಹೊತ್ತು ಬೀದಿ ನಾಯಿಗಳ ಹಾವಳಿ ತುಸು ಜಾಸ್ತಿಯಾಗುತ್ತಿದೆ. ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವನಿಗೆ ಬೀದಿ ನಾಯಿಯೊಂದು ಕಚ್ಚಿದ ಘಟನೆ ಶಿರ್ವದಲ್ಲಿ ನಡೆದಿದೆ. ಕಾಲಿಗೆ ಬಲವಾಗಿ ಕಚ್ಚಿದ್ದರಿಂದ, ವಿಪರೀತ ರಕ್ತಸ್ರಾವವಾಗಿದೆ.

ರಾತ್ರಿವೇಳೆ ಮುಖ್ಯರಸ್ತೆಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ.

You cannot copy content from Baravanige News

Scroll to Top