ಉಡುಪಿ: ಹಲ್ಲೆ ಆರೋಪ; ದೂರು, ಪ್ರತಿದೂರು ದಾಖಲು

ಉಡುಪಿ, ಅ.12: ಅವಾಚ್ಯವಾಗಿ ನಿಂದಿಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಗರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಬ್ರಹ್ಮಾವರದಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿರುವ ಸುಧೀರ್‌ ಅವರು ಇಂದ್ರಾಳಿಯಲ್ಲಿದ್ದಾಗ ಆರೋಪಿಗಳಾದ ಇಸ್ಮಾಯಿಲ್‌, ಶಿವರಾಜ್‌, ರವಿನಾಯ್ಕ… ಅವರು ಸುಧೀರ್‌ ಅವರ ಮೊಬೈಲ್‌ಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಬಗ್ಗೆ ವಿವರಣೆ ಕೇಳಲು ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿ ಇರುವ ಶ್ರೀ ದುರ್ಗಾಪರಮೇಶ್ವರಿ ಹೊಟೇಲ್‌ ಬಳಿ ಬಂದಾಗ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಸುಧೀರ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿದೂರು
ಆಟೋ ಚಾಲಕ ಇಸ್ಮಾಯಿಲ್‌ ಅವರು ಇಂದ್ರಾಳಿಯ ಶ್ರೀ ದುರ್ಗಾಪರಮೇಶ್ವರಿ ಹೊಟೇಲ್‌ಗೆ ಹೋದಾಗ ಆರೋಪಿಗಳಾದ ಸುಧೀರ್‌, ಪ್ರಶಾಂತ್‌ ಶೆಟ್ಟಿ, ಪ್ರಸಾದ್‌, ಪ್ರಕಾಶ್‌ ಅವರು ಇಸ್ಮಾಯಿಲ್‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಇಸ್ಮಾಯಿಲ್‌ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

You cannot copy content from Baravanige News

Scroll to Top