ಉಡುಪಿ : ಪೋಕ್ಸೋ ಪ್ರಕರಣ : ಆರೋಪಿಗಳು ದೋಷಮುಕ್ತ

ಉಡುಪಿ : ಅಪ್ತಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪೋಕ್ಸೊ ಪ್ರಕರಣದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ(ಪೋಕ್ಸೊ) ತ್ವರಿತ ವಿಶೇಷ ನ್ಯಾಯಾಲಯವು ದೋಷಮುಕ್ತಗೊಳಿಸಿ ಆದೇಶಿಸಿದೆ.


ಉದ್ಯಾವರದ ಗುಡ್ಡೆಯಂದಡಿ ನಿವಾಸಿ ಸುರ್ಫುದ್ದೀನ್ ಮತ್ತು ಅವರ ಸಹೋದರಿ ಶಬ್ನಾಝ್ ಖುಲಾಸೆಗೊಂಡ ಆರೋಪಿಗಳು.

ಇನ್ನು ಸರ್ಫುದ್ದೀನ್ ಎಂಬಾತ ತನ್ನ ಸಹೋದರಿಯ 17 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಸಂತ್ರಸ್ತೆಯ ಚಿಕ್ಕಮ್ಮ 2020ರ ನ.5ರಂದು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿ ಸರ್ಫುದ್ಧೀನ್‌ನನ್ನು ಬಂಧಿಸಿದರು. ಈ ಕೃತ್ಯಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಶಬ್ನಾಝ್ ಎಂಬಾಕೆಯನ್ನು ಪೊಲೀಸರು ಬಳಿಕ ಬಂಧಿಸಿದರು.

ತನಿಖೆ ನಡೆಸಿದ ಪೊಲೀಸರು 2021ರ ಜ.2ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯುಷನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ.

You cannot copy content from Baravanige News

Scroll to Top