ಉಡುಪಿಯಲ್ಲಿ ನಾರಾಯಣ ಗುರುಗಳ 169 ನೇ ಜನ್ಮದಿನಾಚರಣೆ

ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರ 169 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದೆ.



ಬನ್ನಂಜೆ ಬಿಲ್ಲವರ ಸೇವಾ ಸಂಘದಲ್ಲಿ ನಾರಾಯಣ ಗುರುಗಳ ಪುತ್ತಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಮಂದಿರದಲ್ಲಿರುವ ದೇವರಿಗೆ ಮುಂಜಾನೆಯಿಂದ ಜನ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ದಿನಪೂರ್ತಿ ಸಾವಿರಾರು ಜನ ಸಂಘಕ್ಕೆ ಬಂದು ದೇವರ ಮತ್ತು ಗುರುಗಳ ದರ್ಶನವನ್ನು ಮಾಡುತ್ತಿದ್ದಾರೆ. ನಾರಾಯಣ ಗುರು ಸಂಘದ ಕಟ್ಟಡಕ್ಕೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿದೆ. ಎಲ್ಲೆಡೆ ಹಳದಿ ಪತಾಕೆಗಳು ರಾರಾಜಿಸುತ್ತಿದೆ.

ಭಜನಾ ಕಾರ್ಯಕ್ರಮಗಳು ದಿನಪೂರ್ತಿ ನಡೆಯುತ್ತಿದೆ.

You cannot copy content from Baravanige News

Scroll to Top