ಮಣಿಪಾಲ, ಆ.19: ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪರ್ಕಳದ ವಸಂತಿ ನಾಯಕ್ (70) ಮೃತರು. ಅವರು ಪರ್ಕಳ ದಿಂದ ಔಷಧ ತೆಗೆದುಕೊಂಡು ಮಣಿಪಾಲ-ಆತ್ರಾಡಿ ರಸ್ತೆ ದಾಟಿ ಆತ್ರಾಡಿ-ಮಣಿಪಾಲದಲ್ಲಿ ರಸ್ತೆ ದಾಟಲು ಡಿವೈಡರ್ ಬಳಿ ನಿಂತುಕೊಂಡಿದ್ದಾಗ ಆತ್ರಾಡಿ ಕಡೆಯಿಂದ ಮಣಿಪಾಲದ ಕಡೆಗೆ ವೇಗದಿಂದ ಬಂದ ಬಸ್, ವಸಂತಿ ನಾಯಕ್ ಅವರಿಗೆ ಡಿಕ್ಕಿಯಾಗಿದೆ.
ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು, ತಲೆ, ಎದೆ ಹಾಗೂ ಹೊಟ್ಟೆಗೆ ತೀವ್ರ ಗಾಯವಾಗಿತ್ತು. ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


