ಖ್ಯಾತ ಕಿರುತೆರೆ ಯುವ ನಟ ಪವನ್ ಹೃದಯಾಘಾತದಿಂದ ನಿಧನ

ಮಂಡ್ಯ, ಆ.18: ಖ್ಯಾತ ಕಿರುತೆರೆ ನಟ ಪವನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹಾರ್ಟ್ ಅಟ್ಯಾಕ್ನಿಂದ ಮೃತಪಟ್ಟ ನೋವು ಕಡಿಮೆ ಆಗುವ ಮೊದಲೇ ಕಿರುತೆರೆ ನಟ ಪವನ್ ಅವರು ಮೃತಪಟ್ಟಿದ್ದಾರೆ.

ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ಮಂಡ್ಯ ಮೂಲದ ಪವನ್ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 25 ವರ್ಷ ವಯಸ್ಸಾಗಿತ್ತು.

ಇಂದು (ಆಗಸ್ಟ್ 18) ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಹರಿಹರಪುರ ಗ್ರಾಮದಲ್ಲಿ ಪವನ್ ಅಂತ್ಯಕ್ರಿಯೆ ನಡೆಯಲಿದೆ. ಅವರ ಕುಟುಂಬದವರು ಹಾಗೂ ಆಪ್ತರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗುತ್ತಿದ್ದಾರೆ.

ಕೆಆರ್ ಪೇಟೆ ಮೂಲದವರಾದ ಪವನ್ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಹಿಂದಿ, ತಮಿಳು ಕಿರುತೆರೆಯಲ್ಲಿ ಪವನ್ ನಟಿಸುತ್ತಿದ್ದರು. ಪವನ್ ಮೃತದೇಹವನ್ನು ಮಂಡ್ಯಕ್ಕೆ ತರಲಾಗಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ.

You cannot copy content from Baravanige News

Scroll to Top