ಉಡುಪಿ : ಆ.19ರಂದು ‘ನನ್ನ ಹಾಡು ನನ್ನದು’ ಸುಗಮ ಸಂಗೀತ ಗೀತಗಾಯನ ಸೀಸನ್ 5 ಫೈನಲ್ ಸ್ಪರ್ಧೆ

ಉಡುಪಿ : ಕಲಾನಿಧಿ ಸಾಂಸ್ಕೃತಿಕ ಕಲಾ ಪ್ರಕಾರಗಳ ಸಂಸ್ಥೆ ಪಿತ್ರೋಡಿ, ರಾಗವಾಹಿನಿ, ಸೃಷ್ಟಿ ಫೌಂಡೇಶನ್ ಕಟಪಾಡಿ ಇವರ ಸಹಯೋಗದಲ್ಲಿ ಸುಗಮ ಸಂಗೀತ ಗೀತಗಾಯನ ಸೀಸನ್ 5 ಫೈನಲ್ ಸ್ಪರ್ಧೆ ‘ನನ್ನ ಹಾಡು ನನ್ನದು’ ಇದೇ ಆ.19ರ ಬೆಳಗ್ಗೆ 9 ಗಂಟೆಗೆ ಉಡುಪಿ ಕೃಷ್ಣಮಠ ರಾಜಾಂಗಣದಲ್ಲಿ ನಡೆಯಲಿದೆ ಎಂದು ಕಲಾನಿಧಿ ಸಂಸ್ಥೆಯ ಅಧ್ಯಕ್ಷೆ ಉಪ್ಪೂರು ಭಾಗ್ಯಲಕ್ಷ್ಮೀ ತಿಳಿಸಿದರು.



ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.19ರಂದು ಬೆಳಿಗ್ಗೆ 9.30ಕ್ಕೆ ಪರ್ಯಾಯ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಿರೂಪಕಿ ಭಾರತಿ ಟಿ. ಕೆ. , ರಾಗವಾಹಿನಿ ಅಧ್ಯಕ್ಷೆ ಸರೋಜಾ ರೋಹಿತ್, ಸ್ಥಾಪಕಾಧ್ಯಕ್ಷ ರೋಹಿತ್ ಮಲ್ಪೆ ಉಪಸ್ಥಿತರಿದ್ದರು.

You cannot copy content from Baravanige News

Scroll to Top