ಪಡುಬಿದ್ರಿ: ಬಾಲಕಿಗೆ ಲೈಂಗಿಕ ದೌರ್ಜನ್ಯ; ಆರೋಪಿ ಸೆರೆ

ಪಡುಬಿದ್ರಿ, ಜು.27: ಬಾಲಕಿಗೆ ಬಿಸ್ಕಿಟ್ ಕೊಡಿಸುವುದಾಗಿ ಆಕೆಯ ತಂದೆ, ತಾಯಿಗೆ ತಿಳಿಸಿ ತನ್ನ ರೂಮಿಗೆ ಕರೆದೊಯ್ದು ಜು. ೨೬ರಂದು ಲೈಂಗಿಕ ದೌರ್ಜನ್ಯವೆಸಗಿದ ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ಹಾಝಿಗಂಝ್ ಅಮ್ದಾಹರದ ನಿವಾಸಿ ಆರೋಪಿ ಮುಫೀಜುಲ್ ಶೇಖ್(೨೬) ಎಂಬಾತನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಆತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಘಟನೆಯ ವಿವರಃ ಪಡುಬಿದ್ರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ವಸತಿ ಸಂಕೀರ್ಣವಾದ ಮಾತಾ ಕನ್ಸಸ್ಟರಕ್ಷನ್‌ ಸಂಸತೆಯಲ್ಲಿ ಕಾರ್ಮಿಕನಾಗಿರುವ ಈ ವಿಕೃತ ಮನಸ್ಸಿನ ಕಿರಾತಕ ಆರೋಪಿಯು ಅಲ್ಲೇ ದುಡಿಯುತ್ತಿದ್ದ. ಅದೇ ಮುರ್ಷಿದಾಬಾದ್ ಜಿಲ್ಲೆಯ ದಂಪತಿಯ ಐದು ವರ್ಷದ ಮಗಳನ್ನೇ ಮದ್ಯಾಹ್ನದ ವೇಳೆ ಅದೇ ಕಟ್ಟಡದ ಮೂರನೇ ಮಹಡಿಯಲ್ಲಿನ ತನ್ನ ರೂಮಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಬಳಿಕ ಬಾಲಕಿಯು ಹೊಟ್ಟೆ ನೋವೆನ್ನತ್ತಲೇ ಕಾಲಲ್ಲಿ ರಕ್ತ ಒಸರುತ್ತಿದ್ದಾಗ ಆಕೆಯನ್ನು ಪಡುಬಿದ್ರಿಯ ಪ್ರಾ. ಆ. ಕೇಂದ್ರಕ್ಕೆ ಕರೆತರಲಾಗಿದೆ. ಅಲ್ಲಿನ ವೈದ್ಯರು ಪರಿಶೀಲಿಸಿ ಲೈಂಗಿಕ ದೌರ್ಜನ್ಯ ನಡೆದಿರುವ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಬಾಲಕಿಯನ್ನು ಪಡುಬಿದ್ರಿ ಠಾಣಾ ಮಹಿಳಾ ಪೇದೆ, ಆಕೆಯ ತಂದೆ, ತಾಯಿ ಜತೆಗೆ ಉಡುಪಿಯ ಸರಕಾರಿ ಮಕ್ಕಳ ಆಸ್ಪತ್ರೆಗೆ ರವಾನಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಸಂಶಯವು ದೃಢಪಟ್ಟಿದೆ.

ಆರೋಪಿಯನ್ನು ಬಂಧಿಸಲಾಗಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾನೂನಿನನ್ವಯ ಪ್ರಕರಣವನ್ನು ದಾಖಲಿಸಲಾಗಿದೆ. ಕಾಪು ವೃತ್ತ ನಿರೀಕ್ಷಕ ಪೂವಯ್ಯ ಅವರು ತನಿಖೆಯನ್ನು ನಡೆಸುತ್ತಿದ್ದಾರೆ.

You cannot copy content from Baravanige News

Scroll to Top