ಮೂಡು ಮಟ್ಟಾರು ಬಬ್ಬರ್ಯ ದೈವಸ್ಥಾನದ ಶಿಲಾನ್ಯಾಸ ಮತ್ತು ಮುಷ್ಠಿ ಕಾಣಿಕೆ ಕಾರ್ಯಕ್ರಮ

ಸುಮಾರು ಒಂದುವರೆ ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರಗೊಳ್ಳುತ್ತಿರುವ ಮೂಡಮಟ್ಟಾರು ಬಬ್ಬರ್ಯ ದೈವಸ್ಥಾನ ಮತ್ತು ಪರಿವಾರ ಸಾನಿಧ್ಯಗಳ ನವೀಕರಣ ಮತ್ತು ಸಾಮೂಹಿಕ ಪ್ರಾರ್ಥನೆ, ಶಿಲಾನ್ಯಾಸ ಮುಷ್ಠಿ ಕಾಣಿಕೆ ಕಾರ್ಯಕ್ರಮ ಜೂನ್ 19ರಂದು ದೈವಸ್ಥಾನದ ಆವರಣದಲ್ಲಿ ನಡೆಯಿತು. ಆಗಮ ಪಂಡಿತ ಕುತ್ಯಾರು ವೇದಮೂರ್ತಿ ಶ್ರೀಧರ್ ತಂತ್ರಿ ಅವರ ನೇತೃತ್ವದಲ್ಲಿ ಮತ್ತು ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರು ವೇದಮೂರ್ತಿ ರಘುಪತಿ ಗುಂಡುಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಮಟ್ಟಾರು ಆರ್ ಕೆ ಕ್ರಷರ್ ಮಾಲಕ ಉದ್ಯಮಿ ದಿವಾಕರ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಕುಟುಂಬದ ಬೇರುಭದ್ರವಾಗಬೇಕು ಊರಿನ ಸಂಬಂಧ ಗಟ್ಟಿಯಾಗಬೇಕು ಎನ್ನುವ ನಿಟ್ಟಿನಲ್ಲಿ ತುಳುನಾಡಿನ ಸಂಸ್ಕೃತಿಯ ದೈವ ದೇವಸ್ಥಾನಗಳು ನಮ್ಮ ಹಿರಿಯರು ಬಿಟ್ಟು ಹೋದ ವ್ಯವಸ್ಥೆಯಾಗಿದೆ ಮತ್ತು ಬಬ್ಬರ್ಯನ ಸೇವೆ ಮಾಡುವ ಅತ್ಯಾಪೂರ್ವ ಅವಕಾಶ ಒದಗಿ ಬಂದಿದ್ದು ಗ್ರಾಮಸ್ಥರು ಊರಿನವರು ಸೇರಿ ನಡೆಸುವ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಸರಕಾರ ಸ್ಪಂದಿಸಿದಿದ್ದಲ್ಲಿ ತನ್ನ ವೈಯಕ್ತಿಕ ನೆಲೆಯಲ್ಲಿ ಸಹಕಾರ ನೀಡಲಾಗುದು ಎಂದು ತಿಳಿಸಿದರು.

ಮುಖ್ಯ ಅತಿಥಿ ಶಿರ್ವ ಗ್ರಾಮಾ ಪಂಚಾಯತ್ ಅಧ್ಯಕ್ಷರು ರತನ್ ಕುಮಾರ್ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಯ ಅಧ್ಯಕ್ಷ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಸಮಿತಿಯ ಕಾರ್ಯಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಶಿರ್ವ ವ್ಯವಸಾಯನಿಕ ಸಹಕಾರಿ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ.ಶಿರ್ವ ವಿಷ್ಣುಮೂರ್ತಿ ದೇವಸ್ಥಾನ ಪ್ರದಾನ ಅರ್ಚಕರು ವೇದಮೂರ್ತಿ ರಘು ಭಟ್ ಮಾತನಾಡಿದರು.

ದೈವಸ್ಥಾನ ಮುಕೇಸ್ತರರು ಭಗವಾನ್ ದಾಸ್ ಶೆಟ್ಟಿ, ಗುರುರಾಜ್ ಭಟ್ ಬಬ್ಬರ್ಯ ಸಮಿತಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಉದ್ಯಮಿ ವಿವೇಕ್ ಆಚಾರ್ಯ ವೇದಿಕೆಯಲ್ಲಿದ್ದರು.ಮಾಜಿ ತಾಲೂಕು ಪಂಚಾಯತ್ ಸದಸ್ಯರು ಇಗ್ನೇಶಿಯಶ್ ಡಿಸೋಜ್, ಧರ್ಮಟ್ಟು ಶಂಕರ್ ಶೆಟ್ಟಿ ಮಟ್ಟಾರ್ ಶೈಲೇಶ್ ಹೆಗ್ಡೆ

ಬಲ್ಲಾಡಿಗುತ್ತು ವಸಂತ್ ಶೆಟ್ಟಿ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಹರೀಶ್ ಪೂಜಾರಿ ಮತ್ತು ಪದಾಧಿಕಾರಿಗಳು ಸ್ಥಳವಂದಿಗರು ಗ್ರಾಮಸ್ಥರು, ಭಕ್ತರು ಉಪಸ್ಥಿತರಿದ್ದರು. ಮಂಜುನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಬಳಿಕ ಮುಷ್ಠಿ ಕಾಣಿಕೆ ಕಾರ್ಯಕ್ರಮ ನೆರವೇರಿ ಮತ್ತು ಕಾರ್ಯಕ್ರಮದಲ್ಲಿ ನೂತನ ಶಾಸಕರಿಗೆ ಮೂಡು ದೇವಸ್ಥಾನದಿಂದ ಮತ್ತು ಗ್ರಾಮಸ್ಥರಿಂದ ಅಭಿನಂದನ ಕಾರ್ಯಕ್ರಮವು ನಡೆಯಿತು.

You cannot copy content from Baravanige News

Scroll to Top