ಉಡುಪಿ: ಕೆವೈಸಿ ಅಪ್ಡೇಟ್ ನೆಪದಲ್ಲಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ

ಉಡುಪಿ ಜೂ.23: ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರ ಖಾತೆಯಿಂದ ಸೈಬರ್ ಕಳ್ಳರು 3.99 ಲ.ರೂ ದೋಚಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡೆವಿಡ್ ಅಶೋಕ್ ರೋಡ್ರಿಗಸ್ ಇವರ ಮೊಬೈಲ್ ಗೆ ಕೆ.ವೈ.ಸಿ. ಅಪ್‌‌ಡೇಟ್ ಮಾಡುವ ಬಗ್ಗೆ ಸಂದೇಶವೊಂದು ಬಂದಿತ್ತು. ಈ ಸಂದೇಶವನ್ನು ಬ್ಯಾಂಕ್ ನವರೇ ಕಳಿಸಿರಬಹುದೆಂದು ತಿಳಿದು ಅವರು ಸಂದೇಶದಲ್ಲಿದ್ದ ನಂಬರ್‌ಗೆ ಕರೆ ಮಾಡಿ ಆ ಬಗ್ಗೆ ವಿಚಾರಿಸಿದರು. ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಕೆನರಾ ಬ್ಯಾಂಕ್ ಹೆಡ್ ಆಫೀಸ್ ನಿಂದ ಮಾತನಾಡುವುದು ಎಂದು ಹೇಳಿ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್‌‌ಡೇಟ್ ಮಾಡದೇ ಇದ್ದಲ್ಲಿ ಅಕೌಂಟ್ ಬ್ಲಾಕ್ ಆಗುವುದು ಎಂದು ನಂಬಿಸಿ 4 ಬಾರಿ OTP ಪಡೆದು ಹಂತ ಹಂತವಾಗಿ ಒಟ್ಟು 3,99,989 ರೂ. ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top