ಉಡುಪಿ: ಹಲಸಿನ ಹಣ್ಣು ಮರ ಏರಿದ ಪೇಜಾವರ ಶ್ರೀ ಸ್ವಾಮೀಜಿ – ಫೋಟೋ ವೈರಲ್‌

ಉಡುಪಿ, ಜೂ.16: ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ಶ್ರೀಗಳು ಹಲಸಿನ ಮರ ಏರಿ ಹಣ್ಣುಗಳನ್ನು ಉದುರಿಸಿರುವ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ವಿಶ್ವಪ್ರಸನ್ನ ಶ್ರೀ ಅವರು ಉಡುಪಿ ಮಠದ ಸಮೀಪವಿರುವ ಗೋಶಾಲೆಗೆ ಅವರು ಭೇಟಿ ನೀಡಿದಾಗ ಗೋಶಾಲೆಯಲ್ಲಿದ್ದ ಹಲಸಿನ ಮರವೇರಿ ಹಲಸಿನ ಹಣ್ಣುಗಳನ್ನು ಉದುರಿಸಿ ಬಳಿಕ ಹಲಸಿನ ಹಣ್ಣುಗಳನ್ನು ಬಿಡಿಸಿ ಗೋವುಗಳಿಗೆ ನೀಡಿದ್ದಾರೆ.

ಇನ್ನು ಶ್ರೀಗಳು ಮರವೇರಿದ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You cannot copy content from Baravanige News

Scroll to Top