ದ.ಕ: 11 ತಿಂಗಳ ಮಗುವನ್ನು ಬಿಟ್ಟು ಪ್ರಿಯಕರನಿಗಾಗಿ ಫ್ರೀ ಬಸ್ ಹತ್ತಿ ಪುತ್ತೂರಿಗೆ ಬಂದ ಹುಬ್ಬಳ್ಳಿಯ ಮಹಿಳೆ

ಕರ್ನಾಟಕದಲ್ಲಿ ಜೂನ್ 11 ರಿಂದ ಶಕ್ತಿ ಯೋಜನೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಗೊಂಡಿದೆ. ಫ್ರೀ ಟಿಕೆಟ್ ಹಿನ್ನೆಲೆಯಲ್ಲಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕ ಓಡಾಟ ಹೆಚ್ಚಾಗಿದೆ. ಅದರಲ್ಲೂ ಹೆಚ್ಚಾಗಿ ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿದ್ದಾರೆ. ಇನ್ನು ಈ ಯೋಜನೆಯಿಂದ ಬಡ ಕಾರ್ಮಿಕ, ಕೂಲಿಕಾರರಿಗೆ ಹಾಗೂ ಆಸ್ಪತ್ರೆಗೆ ತೆರಳುವ ಮಹಿಳೆಯರಿಗೆ ಅನುಕೂಲವಾಗಿದೆ. ಆದ್ರೆ, ಇಲ್ಲೋರ್ವ ಮಹಿಳೆ ಪ್ರಿಯಕರನನ್ನ ನೋಡಲು ಫ್ರೀ ಬಸ್ ಹತ್ತಿ ಬಂದಿದ್ದಾಳೆ. ಹೌದು.. ಹುಬ್ಬಳಿಯಿಂದ ದೂರದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದಿಳಿದಿದ್ದಾಳೆ. ತನ್ನ 11 ತಿಂಗಳ ಮಗವನ್ನು ಬಿಟ್ಟು ಪ್ರಿಯಕರನನ್ನ ನೋಡಲು ಬಂದ ವಿವಾಹಿತೆ ಈಗ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹುಬ್ಬಳ್ಳಿಯ ಮಹಿಳೆಯೋರ್ವಳು ತವರು ಮನೆಯಲ್ಲಿ ತನ್ನ ಮಗುವನ್ನು ಬಿಟ್ಟು ಫೋನ್ ಕರೆಯನ್ನು ಸ್ವೀಕರಿಸದೇ ನಾಪತ್ತೆಯಾಗಿದ್ದಳು. ಆಕೆ ಅದೇ ಊರಿನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು, ಆತ ಪುತ್ತೂರಿನ ಕೋಡಿಂಬಾಡಿ ಬಳಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಮಹಿಳೆಯ ಮನೆಯವರಿಗೆ ಮೊದಲೇ ತಿಳಿದಿತ್ತು. ಆಕೆ ನೇರವಾಗಿ ತನ್ನ ಪ್ರಿಯಕರನ ಹತ್ತಿರ ಹೋಗಿರಬಹುದು ಎಂಬ ಶಂಕೆಯಿಂದ ಆಕೆಯ ಮನೆಯವರು ರಾತ್ರಿ ವೇಳೆ ಪುತ್ತೂರಿನ ಕೋಡಿಬಾಡಿಗೆ ಬಂದು ಹುಡುಕಾಡಿದ್ದಾರೆ. ಪರಿಚತವಿಲ್ಲದ ಜನರು ವ್ಯಕ್ತಿಯೋವನನ್ನು ಹುಡುಕಾಟ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರಿಗೆ ತಿಳಿದುಬಂದಿದ್ದು, ಕೂಡಲೇ ಮಹಿಳೆ ಮನೆಯವರಿಂದ ಗ್ರಾಮ ಪಂಚಾಯಿಸಿ ಸದಸ್ಯ ಮಾಹಿತಿ ಪಡೆದುಕೊಂಡು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ಆಧರಿಸಿ ಪೊಲೀಸರು ಅವರ ಜೊತೆ ಹುಡುಕಾಟ ಆರಂಭಿಸಿದ್ದಾರೆ. ಆದ್ರೆ, ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡಿದ್ದ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ.

ತನ್ನ ಗಂಡನಲ್ಲಿ ಆಧಾರ್ ಲಿಂಕ್ ಮಾಡಿ ಬರುತ್ತೇನೆಂದು ಹೇಳಿ ಈಕೆ ಮನೆಯಿಂದ ಎಸ್ಕೇಪ್ ಆಗಿದ್ದಾಳೆ. ಆಧಾರ್ ಕಾರ್ಡ್ ಅನ್ನು ಬಸ್ಸಿನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಗೆ ತೋರಿಸಲು ತಂದಿದ್ದಳು. ಗಂಡನಲ್ಲಿ ಆಧಾರ್ ಲಿಂಕ್ ಬಗ್ಗೆ ಸುಳ್ಳು ಹೇಳಿ ಎಸ್ಕೇಪ್ ಆಗಿದ್ದಾಳೆ. ಇದೀಗ ಎರಡೂ ಮನೆಯವರಿಂದ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗಾಗಿ ಹುಡುಕಾಟ‌ ನಡೆಸುತ್ತಿದ್ದಾರೆ. ಇವರಿಬ್ಬರನ್ನ ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರ್ ಧೈರ್ಯ ಹೇಳಿದ್ದು, ಇದೀಗ ಇಬ್ಬರೂ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದು, ಮೊಬೈಲ್​ ಲೊಕೇಶನ್ ಮೂಲಕ ಅವರಿಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ.

You cannot copy content from Baravanige News

Scroll to Top