ವರುಣನ ಆರ್ಭಟಕ್ಕೆ ರಾಜ್ಯದಲ್ಲಿ ಆರು ಮಂದಿ ಸಾವು

ಬೆಂಗಳೂರು, ಮೇ 22: ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಕಾರು ಮುಳುಗಿ ಮಹಿಳೆ ಮೃತಪಟ್ಟರೆ ಹುಣಸೂರು ಮತ್ತು ಪಿರಿಯಾಪಟ್ಟಣದಲ್ಲಿ ಸಿಡಿಲು ಬಡಿದು ರೈತರಿಬ್ಬರು ಸಾವನ್ನಪ್ಪಿದ್ದಾರೆ. ಪಿರಿಯಪಟ್ಟಣದಲ್ಲಿ ಮತ್ತೊಂದು ಘಟನೆಯಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಳೆಗೆ ಸ್ಕೂಟರ್‌ ಮೇಲೆ ಮರ ಬಿದ್ದು ಸವಾರ, ವಿಜಯನಗರದಲ್ಲಿ ಗ್ರಾ.ಪಂ. ಸದಸ್ಯ ಹಾಗೂ ಕೊಪ್ಪಳದಲ್ಲಿ ಬಾಲಕ ಸಿಡಿಲಿಗೆ ಕೊನೆಯುಸಿರೆಳೆದಿದ್ದಾನೆ.

You cannot copy content from Baravanige News

Scroll to Top