ಉಡುಪಿ: ಅಣ್ಣಾಮಲೈ ಹೆಲಿಕಾಪ್ಟರ್ ನಲ್ಲಿ ಹಣ ತಂದಿಲ್ಲ, ಕಾಂಗ್ರೆಸಿಗರು ದೆಹಲಿಗೆ ಹಣ ಕಳುಹಿಸಿರುವುದು; ಕುಯಿಲಾಡಿ

ಉಡುಪಿ, ಏ.19: ಸೊರಕೆಯವರು ವಿಚಲಿತರಾಗಿ ಮಾತನಾಡುತ್ತಿದ್ದಾರೆ. ಅವರ ಪಕ್ಷದವರು ಹೆಲಿಕಾಪ್ಟರ್ ನಲ್ಲಿ ದುಡ್ಡು ಕಳಿಸಿರುವುದನ್ನು ಮರೆತಿರಬಹುದು. ಅಣ್ಣಾಮಲೈ ಹೆಲಿಕಾಪ್ಟರ್ ನಲ್ಲಿ ದುಡ್ಡು ತಂದಿದ್ದಾರೆ ಎಂಬ ಸೊರಕೆ ಆರೋಪಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಕಿಡಿಕಾರಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಇರುವಾಗ ದೆಹಲಿಗೆ ಯಾವ ರೀತಿ ದುಡ್ಡು ಹೋಗುತ್ತಿದೆ ಎಂಬ ಪಟ್ಟಿಯೇ ಬಂದಿತ್ತು. ಕಾಂಗ್ರೆಸ್ಸಿನ ಮಂಜುನಾಥ್ರ ಪೂಜಾರಿ ಕೂಡಾ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಡಿಕೆಶಿಗೆ ಹಣ ಕೊಟ್ಟು ಟಿಕಟ್ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸೊರಕೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಮುಗಿಸುತ್ತಾರೆ ಎಂದು ಕೂಡಾ ಆರೋಪ ಮಾಡಿದ್ದಾರೆ.
ಸೊರಕೆಯವರು ಮೊದಲು ಇದಕ್ಕೆ ಉತ್ತರಿಸಿಲಿ, ಆ ಬಳಿಕ ಬಿಜೆಪಿ ಕುರಿತು ಮಾತನಾಡಲಿ. ಕಾಂಗ್ರೆಸ್ ಗೆ ಹೇಳಿಕೊಳ್ಳುವಂತದ್ದು ಈ ಜಿಲ್ಲೆಯಲ್ಲಿ ಏನೂ ಇಲ್ಲ. ಉಡುಪಿಯಲ್ಲಿ ಡಾಕ್ಟರ್ ವಿ ಎಸ್ ಆಚಾರ್ಯ ಮತ್ತು ರಘುಪತಿ ಭಟ್ ರು ಹಾಕಿಕೊಟ್ಟ ಪ್ರಗತಿಯನ್ನು ಜನ ನಿರೀಕ್ಷೆ ಮಾಡುತ್ತಿದ್ದಾರೆ. ಬಿಜೆಪಿ ಮಾತ್ರ ಇದನ್ನು ಮುಂದುವರೆಸುತ್ತೆ ಎಂಬುವುದು ಜನರ ನಂಬಿಕೆ ಎಂದರು.

ಭಾರತೀಯ ಜನತಾ ಪಾರ್ಟಿಗೆ ಜಗದೀಶ್ ಶೆಟ್ಟರ್ ಮಾಡೆಲ್ ಅಲ್ಲ, ಬಿಜೆಪಿ ಪಕ್ಷಕ್ಕೆ ರಘುಪತಿ ಭಟ್, ಲಾಲಾಜಿ ಮೆಂಡನ್ ಮಾಡೆಲ್ ಆಗಿದ್ದಾರೆ. ಜಗದೀಶ್ ಶೆಟ್ಟರ್ ಗೆ ಪಕ್ಷ ಎಲ್ಲವನ್ನೂ ನೀಡಿದೆ. ಸವದಿಯವರನ್ನು ಎಂ ಎಲ್ ಸಿ ಮಾಡಿ, ಡಿಸಿಎಂ ಮಾಡಿದ ಪಕ್ಷ ನಮ್ಮದು. ಸ್ವಾರ್ಥಕ್ಕಾಗಿ, ತಾನು ನಿರಂತರವಾಗಿ ಶಾಸಕನಾಗಿ ಇರಬೇಕು ಎಂಬವುದು ಬಿಜೆಪಿ ಪಕ್ಷದಲ್ಲಿ ಒಂದಷ್ಟ ಕಷ್ಟ. ಹೊಸ ಮುಖಗಳಿಗೆ, ಹೊಸ ಯುವಕರಿಗೆ ಅವಕಾಶ ನೀಡುವಲ್ಲಿ ನಮ್ಮದು ಮೂಂಚೂಣಿಯಲ್ಲಿರುವ ಪಕ್ಷ ಎಂದರು.

You cannot copy content from Baravanige News

Scroll to Top