ಅಣ್ಣಾಮಲೈ ಹೆಲಿಕಾಪ್ಟರ್ ನಲ್ಲಿ ಹಣ ತಂದಿದ್ದಾರೆಂದ ಸೊರಕೆ; ತಪಾಸಣೆಗೆ ಹೋಗಿದ್ದ ಅಧಿಕಾರಿಗೆ ಬಿಗ್ ಶಾಕ್..!!!

ಉಡುಪಿ, ಏ.18: ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರು ಅಣ್ಣಾಮಲೈ ಮೇಲೆ ಹೆಲಿಕಾಪ್ಟರ್ ನಲ್ಲಿ ಹಣ ತಂದಿದ್ದಾರೆ ಎನ್ನುವ ಆರೋಪ ಹೊರಿಸಿದ್ದರು. ಈ ಆರೋಪದ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಣ್ಣಮಲೈ ಅವರನ್ನು ಆಹ್ವಾನಿಸಲಾಗಿತ್ತು. ಹಾಗಾಗಿ ಹೆಲಿಕ್ಯಾಪ್ಟರ್ ಮೂಲಕ ಅಣ್ಣಾಮಲೈ ಅವರು ಕಾಪುಗೆ ಆಗಮಿಸಿದ್ದರು.

ಇದೇ ವಿಚಾರವಾಗಿ ಕಾಪು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಅಣ್ಣಾಮಲೈಯವರು ಬರುವ ಹೆಲಿಕಾಪ್ಟರ್ ನಲ್ಲಿ ಹಣ ತೆಗೆದುಕೊಂಡು ಬರಲಾಗಿದೆ, ಚುನಾವಣಾ ಆಯೋಗ ಅದನ್ನ ಪರಿಶೀಲನೆ ಮಾಡಬೇಕು ಅಂತ ಹೇಳಿಕೆ ನೀಡಿದ್ದರು‌. ಹೀಗಾಗಿ, ಜಿಲ್ಲೆಯ ಚುನಾವಣಾ ಅಧಿಕಾರಿಗಳು ಅಣ್ಣಾಮಲೈ ಯವರ ಬ್ಯಾಗ್ ಇನ್ನಿತರ ವಸ್ತುಗಳನ್ನು ಪರಿಶೀಲನೆ ಮಾಡಿದ್ದಾರೆ.

ಇನ್ನು ತಪಾಸಣೆ ವೇಳೆ ಯಾವುದೇ ಹಣ ಅಥವಾ ದಾಖಲೆಗಳು ಸಿಕ್ಕಿಲ್ಲ ಎನ್ನುವ ಪ್ರಕಟಣೆಯನ್ನು ಚುನಾವಣಾ ಅಧಿಕಾರಿಗಳು ಹೊರಡಿಸಿದ್ದಾರೆ. ತಪಾಸಣೆ ನಡೆಸಿ ವಾಹನದಲ್ಲಿ ಒಂದು ಬ್ಯಾಗ್ ಇದ್ದು ಅದರಲ್ಲಿ 2 ಜೊತೆ ಬಟ್ಟೆಗಳು ಹಾಗೂ ಕುಡಿಯುವ ನೀರಿನ ಬಾಟಲ್ ಗಳು ಮಾತ್ರ ಇದೆ ಅಂತ ವರದಿಯನ್ನು ಸಲ್ಲಿಸಿದ್ದಾರೆ.

You cannot copy content from Baravanige News

Scroll to Top