ನವ ವಿವಾಹಿತನಿಗೆ ಸಾವು ತಂದ ಮದುವೆ ಉಡುಗೊರೆ

ಮದುವೆಗೆ ಉಡುಗೊರೆಯಾಗಿ ನೀಡಿದ್ದ ಹೋಮ್ ಥಿಯೇಟರ್ ಸ್ಪೋಟಗೊಂಡು ನವ ವಿವಾಹಿತ ಹಾಗೂ ಆತನ ಸಹೋದರ ಸೇರಿ ಇಬ್ಬರು ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆಯ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಹೋಮ್ ಥಿಯೇಟರ್ ಒಳಗೆ ಸ್ಫೋಟಕವನ್ನು ಇಟ್ಟವರು ಯಾರು ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಘಟನೆ ಹಿನ್ನೆಲೆ: ಎಪ್ರಿಲ್ 1 ನೇ ತಾರೀಖಿನಂದು ಹೇಮೇಂದ್ರ ಮೆರಾವಿ ಅವರ ವಿವಾಹವಾಗಿದ್ದು ಈ ವೇಳೆ ಸಾಕಷ್ಟು ಉಡುಗೊರೆಗಳು ಬಂದಿದ್ದು ಮದುವೆಯ ಕಾರ್ಯಕ್ರಮಗಳು ಮುಗಿದ ಬಳಿಕ ಅಂದರೆ ಸೋಮವಾರ ಮನೆಮಂದಿ ಸೇರಿಕೊಂಡು ಮದುವೆಗೆ ಬಂದಿರುವ ಉಡುಗೊರೆಗಳನ್ನು ಪರಿಶೀಲಿಸುತ್ತಿದ್ದ ವೇಳೆ ಉಡುಗೊರೆಯಾಗಿ ಹೋಮ್ ಥಿಯೇಟರ್ ಕೂಡಾ ಬಂದಿತ್ತು. ಮದುಮಗ ಹಾಗೂ ಆತನ ಸಹೋದರ ಸೇರಿ ಹೋಮ್ ಥಿಯೇಟರ್ ನ ವಯರ್ ಸೆಟ್ ಮಾಡಿ ಪ್ಲಗ್ ಸ್ವಿಚ್ ಹಾಕಿದ ಕೂಡಲೆ ಹೋಮ್ ಥಿಯೇಟರ್ ಸ್ಪೋಟಗೊಂಡಿದೆ ಈ ವೇಳೆ ಹೇಮೇಂದ್ರ ಮೆರಾವಿ ಸ್ಥಳದಲ್ಲೇ ಮೃತಪಟ್ಟರೆ ಸಹೋದರ ಸೇರಿ ಐದು ಮಂದಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಹೋದರ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಬಂದಿರುವ ಉಡುಗೊರೆಗಳ ವಿವರವನ್ನು ಪಡೆದಾಗ ಮ್ಯೂಸಿಕ್‌ ಸಿಸ್ಟಂಮನ್ನು ನೀಡಿರುವುದು ವಧುವಿನ ಮಾಜಿ ಪ್ರಿಯಕರ ಎಂದು ಗೊತ್ತಾಗಿದೆ.
ಈ ಕುರಿತು ವಧುವಿನ ಮಾಜಿ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರ್ಜು ಎಂಬ ಯುವಕ ತಾನೇ ಹೋಮ್‌ ಥಿಯೇಟರ್‌ ಯೊಳಗೆ ಸ್ಫೋಟಕವನ್ನಿಟ್ಟದ್ದು. ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬನ ಜೊತೆ ವಿವಾಹವಾಗಿದ್ದರಿಂದ ಈ ರೀತಿ ಮಾಡಿದೆ ಎಂದು ಪೊಲೀಸರಿಗೆ ಹೇಳಿದ್ದಾನೆ. ಈ ಆಧಾರದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

You cannot copy content from Baravanige News

Scroll to Top