ಬೆಂಗಳೂರು : ಹೆಂಡತಿಯೊಬ್ಬಳು ತನ್ನ ಗಂಡನ ವಿರುದ್ದ ಪೊಲಿಸ್ ಠಾಣೆ ಮೆಟ್ಟಿಲೇರಿದ್ದಾಳೆ. ನನ್ನ ಗಂಡ 150 ಕೆ.ಜಿ ತೂಕವಿದ್ದು, ನನ್ನ ಮೇಲೆ ಕುಳಿತುಕೊಳ್ಳುತ್ತಿದ್ದ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಇದರಿಂದ ನನ್ನ ಕಾಲು ನರ ಊತ ಬಂದಿದೆಯೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಈ ವಿಚಿತ್ರ ಪ್ರಕರಣ ದಾಖಲಾಗಿದೆ. ಚರಣ್ ಗೌಡ ಮತ್ತು ಚೈತ್ರಾ ಇಬ್ಬರ ನಡುವೆ ಪದೇ ಪದೇ ಗಲಾಟೆಯಾಗುತ್ತಿತ್ತು. ಇದರಿಂದ ಬೇಸತ್ತ ಚೈತ್ರಾ ಠಾಣೆ ಮೆಟ್ಟಿಲೇರಿದ್ದಾಳೆ. ನನ್ನ ಪತಿಯ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪಟ್ಟು ಹಿಡಿದಿದ್ದಾಳೆ.
ಹೊಡೆದಿಲ್ಲ, ಬಡಿದಿಲ್ಲ.. ಹೆಂಡತಿ ಕಾಲು ಮುರಿದ ಗಂಡ
ಚೈತ್ರಾ ಮತ್ತು ಚರಣ್ ನಡುವೆ ಜಗಳ ಮಾತಿಗೆ ಮಾತು ಬೆಳೆಯುತಿತ್ತು. ಆದರೆ ಗಂಡ ಹೊಡೆಯುತ್ತಿರಲಿಲ್ಲ, ಬಡಿಯುತ್ತಿರಲಿಲ್ಲ. ಆದರೆ ಪತ್ನಿಯ ಕಾಲು ಮೇಲೆ ಕುಳಿತುಕೊಳ್ಳುತ್ತಿದ್ದ. ಹೀಗೆ ವಿಚಿತ್ರವಾಗಿ ಕೋಪ ತೀರಿಸಿಕೊಳ್ತಿದ್ದ.
ಹೆಂಡತಿ ಮೇಲೆ ಕುಳಿತು ಸೇಡು ತೀರಿಸುತ್ತಿದ್ದ
ಚರಣ್ ಗೌಡ 2022ರಲ್ಲಿ ಚೈತ್ರಾ ಎಂಬಾಕೆಯನ್ನ ಮದುವೆಯಾಗಿದ್ದ. ಮದುವೆಯಾದ ಕೆಲ ತಿಂಗಳ ನಂತರ ಗಂಡ ಹೆಂಡತಿ ಮಧ್ಯೆ ಜಗಳ ಆಗುತ್ತಿತ್ತು. ಆಗಾಗ ಜಗಳ ಆಗುತ್ತಿದ್ದರು ಚರಣ್ ಮಾತ್ರ ಪತ್ನಿಗೆ ಒಂದೇ ಒಂದೂ ಏಟು ಹೊಡೆದಿಲ್ಲವಂತೆ. ಆದರೆ ಜಗಳ ಆದಮೇಲೆ ಚೈತ್ರಾ ಮೇಲೆ ಹೋಗಿ ಕುಳಿತುಕೊಳ್ತಿದ್ದ. ಹೀಗೆ ಕುಳಿತುಕೊಂಡ ಕಾರಣ ಚೈತ್ರಾ ಕಾಲಿಗೆ ಪೆಟ್ಟಾಗಿ ಕಾಲು ಮುರಿದಿದೆ.
ಹೆಂಡತಿ ಕಾಲು ಮುರಿದುಹಾಕಿದ
ಸದ್ಯ ಚೈತ್ರಾ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಡಾಕ್ಟರ್ ಕೆಲ ತಿಂಗಳುಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಇತ್ತ ಪತಿಯ ವಿರುದ್ದ ಕೋಪಗೊಂಡು ಚೈತ್ರಾ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪತಿ ಚರಣ್ ವಿರುದ್ಧ ಸರಿಯದ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.