Monday, July 15, 2024
Homeಸುದ್ದಿಉಡುಪಿಯಲ್ಲಿ ದಾರುಣ ಘಟನೆ.. ಆಡುತ್ತಿದ್ದ ಬಾಲಕನಿಗೆ ಯಮನಾದ ರೆಸಾರ್ಟ್ ಗೇಟ್

ಉಡುಪಿಯಲ್ಲಿ ದಾರುಣ ಘಟನೆ.. ಆಡುತ್ತಿದ್ದ ಬಾಲಕನಿಗೆ ಯಮನಾದ ರೆಸಾರ್ಟ್ ಗೇಟ್

ಉಡುಪಿ, ನ.22: ಮನೆಯ ಸ್ಲೈಡಿಂಗ್ ಗೇಟ್ ಬಿದ್ದು ಬಾಲಕ ದಾರುಣವಾಗಿ ಸಾವನ್ನಪ್ಪಿರೋ ಘಟನೆ ಕೋಟತಟ್ಟು ಎಂಬಲ್ಲಿ ನಡೆದಿದೆ. ಸುಶಾಂತ್ (03) ಮೃತ ಬಾಲಕ.

ಮೃತ ಸುಶಾಂತ್​​ ಸುಧೀರ್ ಕೋಟ್ಯಾನ್ ಶಾರದಾ ದಂಪತಿಯ ಪುತ್ರ. ಮನೆಯ ಬಳಿ ಬಾಲಕ ಆಟವಾಡುತ್ತಿದ್ದ ವೇಳೆ ಗೇಟ್ ಜಾರಿ ಮೈ ಮೇಲೆ ಬಿದ್ದಿದೆ. ರೆಸಾರ್ಟ್​ನ ಗೇಟ್ ಪೃಥ್ವಿರಾಜ್ ಎಂಬವವರಿಗೆ ಸಂಬಂಧಿಸಿದ್ದಾಗಿದೆ. ಪುಟ್ಟ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News