ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆಯ ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳನ್ನು ಹಾಳು ಮಾಡಿದ ಸಿಬ್ಬಂದಿಯನ್ನು ಮುಜರಾಯಿ ಇಲಾಖೆ ಅಮಾನತು ಮಾಡಿದೆ.
ಆರು ದಿನಗಳ ಹಿಂದೆ ಹಂಪಿಯ ವಿರೂಪಾಕ್ಷ ದೇವಾಲಯದ ಬಲ ಭಾಗದಲ್ಲಿ ದ್ವಾರದಲ್ಲಿ ಡ್ರಿಲ್ ಯಂತ್ರದ ಮೂಲಕ ಮೊಳೆ ಹೊಡೆದು ಸ್ಮಾರಕಗಳನ್ನು ಹಾಳು ಮಾಡಿದ್ದರು.
ದೇವಸ್ಥಾನದ ಬಲಭಾಗದಲ್ಲಿ ಜನರ ಸುಗಮ ಸಂಚಾರಕ್ಕೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಸಿಬ್ಬಂದಿ ಶ್ರೀನಿವಾಸ ಅವರು ಡ್ರಿಲ್ ಯಂತ್ರದ ಮೂಲಕ ಕೊರೆದು ಸ್ಮಾರಕವನ್ನು ಹಾಳು ಮಾಡಿದ್ದರು.
ಹಂಪಿಯಲ್ಲಿ ಯಾವುದೇ ಒಂದು ಅಭಿವೃದ್ಧಿ ಕೆಲಸ ಮಾಡಲು ರಾಜ್ಯ ಪುರಾತತ್ವ ಇಲಾಖೆಯ ಅನುಮತಿ ಪಡೆಯಲೇ ಬೇಕು. ಆದರೆ ಯಾವುದೇ ಅನುಮತಿ ಪಡೆಯದೇ ಸ್ಮಾರಕಕ್ಕೆ ಹಾನಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಇಲಾಖೆ ಶ್ರೀನಿವಾಸ ಅವರನ್ನು ಅಮಾನತು ಮಾಡಿ ಆದೇಶಿಸಿದೆ.