ಮದುವೆಗೆ ಎರಡು ದಿನ ಬಾಕಿ ಇರುವಾಗಲೇ ವರನ ಮನೆಯಲ್ಲಿ ಯುವತಿ ಸಾವು..!!!

ವಿಜಯನಗರ : ಮದುವೆಗೆ ಎರಡು ದಿನ ಬಾಕಿ ಇರುವಾಗಲೇ ಯುವತಿಯೊಬ್ಬಳು ವರನ ಮನೆಯಲ್ಲಿಯೇ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ವಿಜಯ ನಗರದ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಎಂಬಲ್ಲಿ ನಡೆದಿದೆ.


ಯುವತಿ ಐಶ್ವರ್ಯಾ ಎಂಬಾಕೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ.

ಯುವಕ ಆಶೋಕ ಮತ್ತು ಐಶ್ವರ್ಯಾ ಯುವಕ-ಯುವತಿ ಇಬ್ಬರು ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದು ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರದ್ದು ಅಂತರ್ಜಾತಿ ವಿವಾಹವಾಗಿತ್ತು. ಈ ನಿಟ್ಟಿನಲ್ಲಿ ಕೆಲವು ಷರತ್ತುಗಳ ಮೇಲೆ ಮದುವೆ ಮಾಡಿಕೊಡಲು ಯುವಕನ ಕಡೆಯವರು ಒಪ್ಪಿದ್ದರು. ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳುತ್ತೇವೆ,ಇದೀಗ ಶಾಸ್ತ್ರ ಇದೆ ಎಂದು ಹೇಳಿ ಐಶ್ವರ್ಯಾಳನ್ನು ಹುಡುಗನ ಕಡೆಯವರು ಕರೆದುಕೊಂಡು ಹೋಗಿದ್ದರು. ಹುಡುಗಿ ಕಡೆಯವರು ಯಾರೂ ಬರಬಾರದೆಂದು ಷರತ್ತು ಕೂಡ ಹಾಕಿದ್ರು ಎಂದು ಹುಡುಗಿಯ ಮನೆಯವರು ಹೇಳುತಿದ್ದಾರೆ.

ಇನ್ನು ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ.ಇದೊಂದು ವ್ಯವಸ್ಥಿತ ಕೊಲೆ ಇದೀಗ ದಿಢೀರನೇ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕತೆ ಕಟ್ಟುತ್ತಿದ್ದಾರೆ ಅಂತ ಯುವತಿ ಕಡೆಯವರು ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಹೊಸಪೇಟೆಯ ಟಿಬಿ ಡ್ಯಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.

You cannot copy content from Baravanige News

Scroll to Top