Monday, July 15, 2024
Homeಸುದ್ದಿಕರಾವಳಿ‘15 ನಿಮಿಷದಲ್ಲಿ 4 ಕೊಲೆ, ವರ್ಲ್ಡ್ ರೆಕಾರ್ಡ್’.. ಹಂತಕ ಪ್ರವೀಣ್ ಚೌಗುಲೆ ಫೋಟೋಗೆ ಕಿರೀಟ; ಇನ್ಸ್ಟಾದಲ್ಲಿ...

‘15 ನಿಮಿಷದಲ್ಲಿ 4 ಕೊಲೆ, ವರ್ಲ್ಡ್ ರೆಕಾರ್ಡ್’.. ಹಂತಕ ಪ್ರವೀಣ್ ಚೌಗುಲೆ ಫೋಟೋಗೆ ಕಿರೀಟ; ಇನ್ಸ್ಟಾದಲ್ಲಿ ವಿಕೃತಿ

ಉಡುಪಿ : ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹಂತಕ ಪ್ರವೀಣ್ ಅರುಣ್ ಚೌಗುಲೆ ಫೋಟೋಗೆ ಕಿರೀಟ ತೊಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

ಹಂತಕ ಪ್ರವೀಣ್ ಅರುಣ್ ಚೌಗುಲೆ ಫೋಟೋಕ್ಕೆ ಕಿರೀಟ ತೊಡಿಸಿ ಹಿಂದೂ ಮಂತ್ರ ಎನ್ನುವ ಇನ್ಸ್ಟಾಗ್ರಾಂ ಖಾತೆ ತನ್ನ ಸ್ಟೇಟಸ್ನಲ್ಲಿ ಶೇರ್ ಮಾಡಿಕೊಂಡಿದೆ.

15 ನಿಮಿಷದಲ್ಲಿ 4 ಕೊಲೆ, ಇದು ವರ್ಲ್ಡ್ ರೆಕಾರ್ಡ್ ಎಂದು ಬರೆದು ವಿಕೃತಿ ಮೆರೆದಿದ್ದಾರೆ.

ಸದ್ಯ ಈ ಘಟನೆ ಗಮನಕ್ಕೆ ಬರುತ್ತಿದ್ದಂತೆ ಉಡುಪಿ ಪೋಲಿಸರು ಕ್ರಮ ತೆಗೆದುಕೊಂಡಿದ್ದು ಪೋಸ್ಟ್ ಶೇರ್ ಮಾಡಿದ್ದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಕೇಸ್ ದಾಖಲಿಸುತ್ತಿದ್ದಂತೆ ಹಿಂದೂ ಮಂತ್ರ ಅಕೌಂಟ್ನಿಂದ ಪೋಸ್ಟ್ ಅನ್ನು ತೆಗೆದು ಹಾಕಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News