ನೆರೆಯ ಡ್ರ್ಯಾಗನ್ ದೇಶ ಚೀನಾ ಏನಾದರೊಂದು ಸರ್ಕಸ್ ಮಾಡುತ್ತಿರುತ್ತದೆ. ಅದರಂತೆಯೇ ಇದೀಗ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಪರಿಚಯಿಸಲು ಮುಂದಾಗಿದೆ. ಅಚ್ಚರಿ ಸಂಗತಿ ಎಂದರೆ ಈ ಇಂಟರ್ನೆಟ್ ಮೂಲಕ 1 ಸೆಕೆಂಡ್ಗೆ 150 ಸಿನಿಮಾಗಳನ್ನು ಡೌನ್ಲೋಡ್ ಮಾಡಬಹುದಾಗಿದೆ ಎಂದು ಹೇಳಲಾಗುತ್ತಿದೆ.
ಚೀನಾದ ಸಿಂಘುವಾ ವಿಶ್ವವಿದ್ಯಾಲಯ, ಚೀನಾ ಮೊಬೈಲ್, ಹುವಾವೇ ಟೆಕ್ನಾಲಜೀಸ್ ಮತ್ತು ಸರ್ನೆಟ್ ಕಾರ್ಪೋರೇಷನ್ ಒಳಗೊಂಡು ವಿಶ್ವದ ಅತಿ ವೇಗದ ಇಂಟರ್ನೆಟ್ ಪರಿಚಯಿಸಲು ಮುಂದಾಗಿದೆ. ಈ ಬಗ್ಗೆ ಪ್ರಯೋಗ ನಡೆಯುತ್ತಿದೆ. ಇಮದು ಪ್ರತಿ ಸೆಕೆಂಡ್ಗೆ 1.2 ಟೆರಾಬಿಟ್ ವೇಗದ ಡೇಟಾವನ್ನು ನೀಡಲಿದೆ.
ಹುವಾಯ್ ಟೆಕ್ನಾಲಜೀಸ್ ಉಪಾಧ್ಯಕ್ಷ ವಾಂಗ್ಲೀ, ವೇಗದ ಇಂಟರ್ನೆಟ್ ಮೂಲಕ ಒಂದು ಸೆಕೆಂಡ್ಗೆ 150 ಹೈ-ಡೆಫಿನೀಷನ್ ಸಿನಿಮಾ ಡೌನ್ ಮಾಡಬಹುದಾದ ಡೇಟಾವನ್ನು ವಿತರಿಸುತ್ತದೆ ಎಂದು ಹೇಳಿದ್ದಾರೆ.
ಸದ್ಯ ಪ್ರಪಂಚದಲ್ಲಿರುವ ಇಂಟರ್ನೆಟ್ ಪ್ರತಿ ಸೆಕೆಂಡ್ಗೆ 100 ಗಿಗಾಬಿಟ್ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಯುನೈಟೆಡ್ ಸ್ಟೇ್ಸ್ 5ನೇ ತಲೆಮಾರಿನ ಇಂಟರ್ನೆಟ್ ವಿತರಿಸುವತ್ತ ಮುಂದಾಗಿದೆ. ಇದು ಪ್ರತಿ ಸೆಕೆಂಡ್ಗೆ 400 ಗಿಗಾಬಿಟ್ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.