ಗಂಗೊಳ್ಳಿ: ಮೀನು ಮಾರಾಟ ವ್ಯವಹಾರದಲ್ಲಿ ವಂಚನೆ: ಆರೋಪಿ ಪರಾರಿ

ಗಂಗೊಳ್ಳಿ, ನ 14: ಗಂಗೊಳ್ಳಿಯಲ್ಲಿ ಮೀನು ಮಾರಾಟ ವ್ಯವಹಾರದಲ್ಲಿ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ.

ಗಂಗೊಳ್ಳಿಯ ಸುನಿಲ್ ಎಂಬುವವರಿಗೆ ಆರೋಪಿ ಜನಾರ್ದನ ಮೀನು ಮಾರಾಟ ಮಾರಾಟ ವ್ಯವಹಾರದಲ್ಲಿ ವಂಚಿಸಿ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.

ಸುನಿಲ್ ಹಾಗೂ ಆರೋಪಿ ಜನಾರ್ದನ ಜೊತೆಯಾಗಿ ಮೀನುಗಳನ್ನು ಖರೀದಿಸಿ ಮಾರಾಟ ಮಾಡುವ ಎಸ್‌.ಎಂ.ಎ.ವೈ.ಸಿ. ಎಂಬ ಪಾಲುಗಾರಿಕಾ ಸಂಸ್ಥೆಯನ್ನು ಪ್ರಾರಂಭಿಸಿದ್ದು ಇಬ್ಬರೂ ತಲಾ 4.5 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದ್ದರು. ಸುನಿಲ್ ಶ್ರೀ ರಾಮ ಕರಾವಳಿ ಮೀನುಗಾರರ ವಿವಿಧೋದ್ದೇಶ ಸಂಘ ಮರವಂತೆ ಮೂಲಕ ಮೀನುಗಳನ್ನು ಸಾಲದ ರೂಪದಲ್ಲಿ ಖರೀದಿಸಿ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದರು. ಈ ಮೀನುಗಳನ್ನು ಖರೀದಿ ಮಾಡಲು ತಮ್ಮ ಸ್ಥಿರಾಸ್ತಿಯನ್ನು ಅಡಮಾನ ಇರಿಸಿದ್ದರು.

ಸುನಿಲ್ ಹಾಗೂ ಆರೋಪಿ ಜನಾರ್ದನ ಪ್ರಾರಂಭಿಸಿದ ಪಾಲುಗಾರಿಕೆ ಸಂಸ್ಥೆಯಲ್ಲಿ 3 ತಿಂಗಳಲ್ಲಿ 2,64,90,925 ರೂ.ಗಳಷ್ಟು ಮೀನು ಖರೀದಿ ಮಾಡಿ ಮಾರಾಟ ಮಾಡಿದ್ದು ಸಾಲ ಪಡೆದ ಸಂಘಕ್ಕೆ 1,51,50,000 ರೂ. ಹಣ ಪಾವತಿ ಮಾಡಿದ್ದರು.

ಇನ್ನು 1,13,40,925 ರೂ. ಹಣ ಪಾವತಿ ಮಾಡಲು ಬಾಕಿ ಇತ್ತು. ಪಾಲುಗಾರಿಕೆ ಸಂಸ್ಥೆಯ ವ್ಯವಹಾರನ್ನು ಜನಾರ್ದನ ನಿರ್ವಹಿಸುತ್ತಿದ್ದು, ಮೀನು ಖರೀದಿ ಮಾಡಿದ ವ್ಯಕ್ತಿಗಳಿಂದ 90 ಲಕ್ಷ ರೂ. ಹಣವು ಗಂಗೊಳ್ಳಿಯ ಕೆನರಾ ಬ್ಯಾಂಕ್‌ ಶಾಖೆಯ ಜನಾರ್ದನನ ಖಾತೆಗೆ ಜಮೆಯಾಗಿದ್ದು ಆರೋಪಿಯು ತನ್ನ ಖಾತೆಗೆ ಬಂದ ಹಣವನ್ನು ಸಂಘಕ್ಕೆ ಪಾವತಿಸದೇ ಮೋಸ ಮಾಡಿ ನ.7ರಂದು ಮನೆ ಬಿಟ್ಟು ಪರಾರಿಯಾಗಿರುವುದಾಗಿ ಪ್ರಕರಣ ದಾಖಲಾಗಿದೆ

You cannot copy content from Baravanige News

Scroll to Top