ಪುರಾತನ ಈಶ್ವರ ದೇವಸ್ಥಾನದ ಆವರಣದಲ್ಲಿ ನಿಧಿ ಪತ್ತೆ : ಕಾಫಿ ತೋಟದಲ್ಲಿ ಕಾರ್ಮಿಕರ ಕಣ್ಣಿಗೆ ಬಿತ್ತು ಪುರಾತನ ಕಾಲದ ಚಿನ್ನಾಭರಣ

ಮಡಿಕೇರಿ : ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆನಂದಪುರ ಗ್ರಾಮದಲ್ಲಿರುವ ಪುರಾತನ ಈಶ್ವರ ದೇವಸ್ಥಾನ ಆವರಣದಲ್ಲಿ ನಿಧಿ ಪತ್ತೆಯಾಗಿದೆ.

ದೇವಸ್ಥಾನ ಆವರಣದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಮಣ್ಣಿನ ಮಡಕೆಯಲ್ಲಿ ಚಿನ್ನದ ನಗನಾಣ್ಯ ಪತ್ತೆಯಾಗಿವೆ.

ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿತೋಟದಲ್ಲಿ‌ ಪುರಾತನ ಈಶ್ವರ ದೇವಸ್ಥಾನ ಇದೆ. ಈ ದೇವಸ್ಥಾನದ ಆವರಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಭೂಮಿಯಡಿಯಲ್ಲಿ ಮಣ್ಣಿ ಮಡಕೆ ಪತ್ತೆಯಾಗಿದ್ದು, ಅದರಲ್ಲಿ ಚಿನ್ನದ ಆಭರಣಗಳು ಪತ್ತೆಯಾಗಿವೆ.

ಈ ಬಗ್ಗೆ ಟಾಟಾ ಕಾಪಿ ತೋಟ ಸಂಸ್ಥೆ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿರಾಜಪೇಟೆ ತಹಶೀಲ್ದಾರ್‌ ಸಮ್ಮುಖದಲ್ಲಿ ಮಹಜರು ನಡೆಸಿ ಕೊಡಗು ಜಿಲ್ಲಾಧಿಕಾರಿ ವಶಕ್ಕೆ ನಿಧಿಯನ್ನು ಹಸ್ತಾಂತರಿಸಿದ್ದಾರೆ.

You cannot copy content from Baravanige News

Scroll to Top