ಕೋಟ : ಸಾಲಿಗ್ರಾಮ ಸಮೀಪ ಕೋಡಿಕನ್ಯಾಣದಲ್ಲಿ ಕಳೆದ ತಿಂಗಳು ಬೈಕ್ ಹಾಗೂ ಕಾರುಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಚರಣ್ ಕಾಂಚನ್ (22) ಮೃತ ಯುವಕ.
ಅ.15ರಂದು ರಾತ್ರಿ ಕೋಡಿ ಕನ್ಯಾಣದಿಂದ ಪಡುಕರೆ ಕಡೆಗೆ ಸಂಚರಿಸುತ್ತಿದ್ದ ಬೈಕ್‌ವೊಂದು ಕಾರು ಹಾಗೂ ಎದುರಿಗೆ ಬರುತ್ತಿದ್ದ ಮತ್ತೂಂದು ಬೈಕ್‌ಗೆ ಢಿಕ್ಕಿಯಾಗಿತ್ತು.
ಇನ್ನು ಅಪಘಾತದಲ್ಲಿ ಬೈಕ್ ಸವಾರ ರವಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಕೋಟ : ಸರಣಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು
