22 ವರ್ಷದ ಯುವಕನ ರುಂಡ ಕತ್ತರಿಸಿ ವಾಮಾಚಾರ.. ಪ್ರಜ್ಞೆ ತಪ್ಪಿಸಿ ನರಬಲಿ ನೀಡಿದ್ರು ಪಾಪಿಗಳು

22 ವರ್ಷದ ಯುವಕನನ್ನು ಮೋಸಗೊಳಿಸಿ ತಲೆ ಕಡಿದು ನರಬಲಿ ನೀಡಿದ ಅಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ನರಸಿಂಗ್​ ಪುರದಲ್ಲಿ ನಡೆದಿದೆ. ಅಂಕಿತ್​ ಕೌರವ್​ ಎಂಬಾತ ಮೋಸದಿಂದ ಶಿರಚ್ಛೇದಗೊಂಡ ಯುವಕ ಎಂದು ಗುರುತಿಸಲಾಗಿದೆ.

ನವೆಂಬರ್​ 4 ರಂದು ಹೊಲದಲ್ಲಿ ವಿರೂಪಗೊಂಡ ಸ್ಥಿತಿಯಲ್ಲಿ ಅಂಕಿತ್ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಕುಟುಂಬದವರ ಆರೋಪದ ಹಿನ್ನೆಲೆ ತನಿಖೆ ಕೈಗೊಂಡ ಮಧ್ಯಪ್ರದೇಶ ಪೊಲೀಸರು ಇಬ್ಬರು ಪೂಜಾರಿಗಳನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದವರನ್ನು ಸಿಮಾರಿಯಾ ನಿವಾಸಿ ಸುರೇಂದ್ರ ಕಚಿ (40) ಮತ್ತು ಕರೇಲಿ ನಿವಾಸಿ ಭಗವಾನ್​ ದಾಸ್​ ಅಲಿಯಾಸ್​ ರಾಮು ಕಚಿ (45)​ ಎಂದು ಗುರುತಿಸಲಾಗಿದೆ.

ಆರ್ಥಿಕ ಸಂಕಷ್ಟ

ಅಂಕಿತ್​ ಕೌರವ್​ ಕುಟುಂಬವು ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಈ ಕಾರಣಕ್ಕೆ ಪೂಜಾರಿಗಳ ಸಹಾಯ ಪಡೆಯಲು ಮುಂದಾಗುತ್ತಾನೆ. ಈ ವೇಳೆ ಅವರು ಆತನ ಬಲಗೈನ ಮಧ್ಯದ ಬೆರಳನ್ನು ಕತ್ತರಿಸಲು ಮನವೊಳಿಸಿದಲ್ಲದೆ, ಆರ್ಥಿಕ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಬಳಿಕ ಇಬ್ಬರು ಅಂಕಿತ್​ಗೆ ನಿದ್ರೆ ಮಾತ್ರೆ ನೀಡಿದ್ದಾರೆ. ಟೇಕಪುರದ ಗ್ರಾಮಕ್ಕೆ ಆತನನ್ನು ಕರೆದುಕೊಂಡು ಹೋಗಿ ಕೈ, ಬೆರಳು ಮತ್ತು ರುಂಡವನ್ನು ಕತ್ತರಿಸಿದ್ದಾರೆ.

ನಿದ್ರೆ ಮಾತ್ರೆ ಬೆರೆಸಿ ರುಂಡ ಕತ್ತರಿಸಿದ ಪಾಪಿಗಳು

ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಈ ಪ್ರಕರಣ ಕುರಿತು ಮಾತನಾಡಿದ್ದು, ಅಂಕಿತ್ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಕುಟುಂಬದವರ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಆತನಿಗೆ ಕಾಡಿತ್ತು. ಹೀಗಾಗಿ ತಂತ್ರಿಗಳ ಮೊರೆ ಹೋಗಿ ಆರ್ಥಿಕ ಸಂಕಷ್ಟಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾನೆ. ಅದಕ್ಕಾಗಿ ತಂತ್ರಿಯಾದ ಸುರೇಂದ್ರ ಕಚಿಯನ್ನು ಭೇಟಿ ಮಾಡಿದ್ದಲ್ಲದೆ, ಹಣ ಬರುವಂತೆ ಮಾಡಲು ಧಾರ್ಮಿಕ ಕ್ರಿಯೆ ಮಾಡಲು ಹೇಳಿದ್ದಾರೆ. ಆತನಿಗೆ ಬೆರಳನ್ನು ತ್ಯಾಗ ಮಾಡುವಂತೆ ಹೇಳಿದ್ದಾರೆ. ನವೆಂಬರ್ 3ರಂದು ಪ್ರಸಾದದಲ್ಲಿ ನಿದ್ರೆ ಮಾತ್ರೆ ಬೆರೆಸಿ ಆತನ ಪ್ರಶಜ್ನೆ ತಪ್ಪಿಸಿದ್ದಾರೆ. ಬಳಿಕ ಆತನ ರುಂಡವನ್ನು ಕತ್ತರಿಸಿದ್ದಾರೆ ಎಂದು ಹೇಳಿದ್ದಾರೆ.

ಅಂಕಿತ್ ಶವವನ್ನು ಕುಟುಂಬಸ್ಥರು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಬಳಿಕ ಅಂಕಿತ್ನನ್ನು ಗ್ರಾಮದ ಕೊಳವನ್ನು ದಾಟಿ ಬಳಿ ನೀಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಆರೋಪಿಗಳ ಮೇಲೆ ಸೆಕ್ಷನ್ 302,201,120 (ಬಿ) ಮತ್ತು 34ರ ಅಡಿಯಲ್ಲಿ ಕೇಸ್ ದಾಖಲಾಗಿದೆ.

You cannot copy content from Baravanige News

Scroll to Top