ಮುಂದಿನ ತಿಂಗಳು ನಿಮ್ಮ ಜಿಮೇಲ್ ಖಾತೆಯೂ ರದ್ದಾಗಬಹುದು..!!!

ನವದೆಹಲಿ : ನಿರಂತರವಾಗಿ ಬಳಕೆಯಾಗದ ಜಿ ಮೇಲ್ ಖಾತೆ ಡಿಸೆಂಬರ್‌ನಲ್ಲಿ ನಿಷ್ಕಿಯಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಎರಡು ವರ್ಷ ಗಳಿಂದ ಬಳಕೆ ಮಾಡದಿರುವ ಜಿ ಮೇಲ್ ಖಾತೆಗಳನ್ನು ರದ್ದುಗೊಳಿಸುವ ಹಿನ್ನಲೆ ಲಕ್ಷಾಂತರ ಜಿ ಮೇಲ್ ಖಾತೆಗಳು ರದ್ದಾಗುವ ಸಾಧ್ಯತೆ ಎಂದು ವರದಿಯೊಂದು ತಿಳಿಸಿದೆ.

ಮೇ ತಿಂಗಳಿನಲ್ಲಿ ಗೂಗಲ್ ನ ಪ್ರಾಡಕ್ಟ್ ಮ್ಯಾನೇಜ್ ಮೆಂಟ್ ರುಚ್ ಕ್ರಿಚೇಲಿ ಎರಡು ವರ್ಷಗಳ ಕಾಲ ಬಳಕೆ ಮಾಡದಿರುವ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡಲು ಗೂಗಲ್ ನಿರ್ಧ ರಿಸಿದೆ.

ಒಂದು ವೇಳೆ ಗೂಗಲ್ ಖಾತೆಯನ್ನು ಕನಿಷ್ಠ ಎರಡು ವರ್ಷಗಳಿಂದ ಉಪಯೋಗಿಸದಿದ್ದಲ್ಲಿ ಅಥವಾ ಸೈನ್ ಇನ್ ಮಾಡದಿದ್ದಲ್ಲಿ ನಾವು ಖಾತೆ ಮತ್ತು ಅದರ ಕಂಟೆಂಟ್ ಅನ್ನು ಡಿಲೀಟ್ ಮಾಡಬೇಕಾಗುತ್ತದೆ. ಇದರಲ್ಲಿ ಜಿ ಮೇಲ್, ಡಾಕ್ಯುಮೆಂಟ್, ಡ್ರೈವ್, ಮೀಟ್, ಕ್ಯಾಲೆಂಡರ್ ಮತ್ತುಗೂಗಲ್ ಫೋಟೊಸ್ ಕೂಡಾ ಸೇರಿದೆ ಎಂದು ತಿಳಿಸಿದ್ದರು.

ಆದರೆ ಇದು ಸಂಘ, ಸಂಸ್ಥೆ, ಉದ್ಯಮ, ಶಾಲೆ ಗಳಿಗೆ ಸಂಬಂದಪಟ್ಟ ಜಿ ಮೇಲ್ ಖಾತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿಯಾಗಿದೆ. ಒಟ್ಟು ಸುಮಾರು 10 ಲಕ್ಷ ಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳಿವೆ ಎನ್ನಲಾಗುತ್ತಿದೆ

You cannot copy content from Baravanige News

Scroll to Top