ಬಣ್ಣ ಬೆರೆಸುವಾಗ ಎಡವಟ್ಟು.. ಮಹಿಳೆ ತಲೆಯನ್ನೇ ಕತ್ತರಿಸಿದ ಗ್ರೈಂಡರ್..!!!

ಬೆಂಗಳೂರು : ಬಣ್ಣ ಬೆರೆಸುವ ಗ್ರೈಂಡರ್ಗೆ ಜಡೆ ಸಿಲುಕಿ ಮಹಿಳೆ ತಲೆ ಕಟ್ ಆಗಿದೆ. ಗ್ರೈಂಡರ್ ತಲೆ ಕತ್ತರಿಸಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಶ್ವೇತಾ (34) ಮೃತ ಮಹಿಳೆ.

ಎರಡು ದಿನಗಳ ಹಿಂದೆ ಮಂಗಳವಾಗ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೆಲಗದರನಹಳ್ಳಿ ಶ್ರೀ ಪೇಂಟ್ಸ್ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ.

ಅಸಲಿಗೆ ಆಗಿದ್ದೇನು..?

ಬಣ್ಣ ಗಟ್ಟಿಯಾಗಿದ್ದ ಕಾರಣ ಚೆಕ್ ಮಾಡಲು ಗ್ರೈಂಡರ್ ಸಮೀಪ ಮಹಿಳೆ ಬಂದಿದ್ದಳು. ಈ ಸಂದರ್ಭದಲ್ಲಿ ಜಡೆ ಗ್ರೈಂಡರ್ಗೆ ಸಿಲುಕಿ ತಲೆ ಕಟ್ ಆಗಿದೆ. ಈ ವೇಳೆ ಮಹಿಳೆ ಎಷ್ಟೇ ಕೂಗಾಡಿದ್ರೂ ಯಾರಿಗೂ ಕೇಳಿಸಿಲ್ಲ. ಬಳಿಕ ಕೆಲಸಗಾರರು ಬಂದು ನೋಡಿದಾಗ ಗೊತ್ತಾಗಿದೆ.

ಶ್ವೇತಾ ಮಗು ಗಂಡನೊಂದಿಗೆ ಮಲ್ಲತ್ತಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

You cannot copy content from Baravanige News

Scroll to Top