Monday, July 15, 2024
Homeಸುದ್ದಿಕರಾವಳಿಅಕ್ಷಯ್ ಕಲ್ಲೇಗ ಹತ್ಯೆ ವೇಳೆ ಆರೋಪಿಗಳು ಗಾಂಜಾ ಸೇವಿಸಿದ ಬಗ್ಗೆ ವರದಿ ಬಂದಿಲ್ಲ – ಎಸ್ಪಿ...

ಅಕ್ಷಯ್ ಕಲ್ಲೇಗ ಹತ್ಯೆ ವೇಳೆ ಆರೋಪಿಗಳು ಗಾಂಜಾ ಸೇವಿಸಿದ ಬಗ್ಗೆ ವರದಿ ಬಂದಿಲ್ಲ – ಎಸ್ಪಿ ರಿಷ್ಯಂತ್ ಸಿಬಿ

ಪುತ್ತೂರು : ಕಲ್ಲೇಗ ಟೈಗರ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಬಿ ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳು ಗಾಂಜಾ ಸೇವಿಸಿ ಕೃತ್ಯ ಎಸಗಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದಿದ್ದಾರೆ.


ನವೆಂಬರ್ 6 ರಂದು ಪುತ್ತೂರಿನ ಹೊರವಲಯದ ನೆಹರೂನಗರದಲ್ಲಿ ಅಕ್ಷಯ್ ಕಲ್ಲೇಗ ಅವರನ್ನು ನಾಲ್ವರು ದುಷ್ಕರ್ಮಿಗಳು ತಲವಾರ್ ನಿಂದ ಹಲ್ಲೆ ನಡೆಸಿದ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಬಿ ಅಕ್ಷಯ್ ಕಲ್ಲೇಗ ಹತ್ಯೆ ವೇಳೆ ಆರೋಪಿಗಳು ಗಾಂಜಾ ಸೇವಿಸಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದರು.


ಸದ್ಯದ ವಿಚಾರಣೆಯಲ್ಲಿ ತಿಳಿದು ಬಂದಿರುವುದು ಅಪಘಾತದ ವಿಚಾರಕ್ಕೆ ನಡೆದ ಗಲಾಟೆಗೆ ಹತ್ಯೆಯಾಗಿದೆ ಎಂಬ ಮಾಹಿತಿ ಇದೆ ಎಂದರು. ಕೊಲೆ ಮಾಡಿದ ಆರೋಪಿಗಳೆಲ್ಲರೂ ಅಕ್ಷಯ್ ಕಲ್ಲೇಗ ಅವರ ಪರಿಚಯಸ್ಥರೇ ಎಂದರು. ಇನ್ನು ಹಳೇ ವೈಷಮ್ಯದಿಂದ ಅಕ್ಷಯ್ ಕಲ್ಲೇಗ ಹತ್ಯೆ ನಡೆಯಿತಾ ಎಂಬುದರ ಕುರಿತು ತನಿಖೆ ನಡೆಯುತ್ತಿದೆ, ಅಲ್ಲದೆ ಹತ್ಯೆಯ ಹಿಂದೆ ಬೇರೇ ಏನಾದರು ಕಾರಣವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದರು. ಇನ್ನು ಹತ್ಯೆಯಾಗಿರುವಅಕ್ಷಯ್ ಕಲ್ಲೇಗ ಓರ್ವ ರೌಡಿ ಶೀಟರ್ ಆಗಿದ್ದು ಆತನ ವಿರುದ್ಧವೂ ಹಲವು ಪ್ರಕರಣ ದಾಖಲಾಗಿತ್ತು ಎಂದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News