ಕ್ರೀಡೆಯಿಂದ ಯುವಕರ ಭವಿಷ್ಯ ರೂಪುಗೊಳ್ಳುತ್ತದೆ-ಗೌತಮ್ ಶೆಟ್ಟಿ

ಉಡುಪಿ : ಟಿ.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ 2 ದಿನವಾದ ಮಂಗಳವಾರ ನಡೆದ ಹೈಸ್ಕೂಲ್ ವಿಭಾಗದ ಪಂದ್ಯಾಟದಲ್ಲಿ ಟಿ‌‌‌.ಎ ಪೈ ಪ್ರೌಢಶಾಲೆ ಉಡುಪಿ ಜಯ ಸಾಧಿಸಿತು.



ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟಿ.ಸಿ‌.ಎ ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ “ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ,ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೆ,ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ” ಎಂದರು.

ಹೈಸ್ಕೂಲ್ ವಿಭಾಗದಲ್ಲಿ ಒಟ್ಟು ಎಂಟು ತಂಡಗಳ ನಡುವೆ ಲೀಗ್ ಹಂತದಲ್ಲಿ ರೋಚಕ ಹಣಾಹಣಿ ಸಾಗಿತ್ತು.ಉಪಾಂತ್ಯ ಪಂದ್ಯದಲ್ಲಿ ಗ್ರೀನ್ ಪಾರ್ಕ್ ಹಿರಿಯಡ್ಕ-ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯನ್ನು ಹಾಗೂ ಟಿ.ಎ.ಪೈ-ಸೈಲಸ್ ಉಡುಪಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.


ವೈದಿಕ್ ಶೆಟ್ಟಿ ಸಮಯೋಚಿತ ಆಟ-ಟಿ.ಎ ಪೈ ತಂಡ ಚಾಂಪಿಯನ್

ಫೈನಲ್ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಗ್ರೀನ್ ಪಾರ್ಕ್ ಹೈಸ್ಕೂಲ್ ಹಿರಿಯಡ್ಕ ಪವನ್ 34 ರನ್ ನೆರವಿನಿಂದ ನಿಗದಿತ 10 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 68 ರನ್ ಕಲೆ ಹಾಕಿತ್ತು.

‌ಇದಕ್ಕುತ್ತರವಾಗಿ ಟಿ‌.ಎ ಪೈ ತಂಡ ವೈದಿಕ್ ಶೆಟ್ಟಿ ಅಜೇಯ 35 ರನ್ ಗಳ ಜವಾಬ್ದಾರಿಯುತ ಆಟದ ನೆರವಿನಿಂದ ಕೊನೆಯ ಓವರ್ ನಲ್ಲಿ ಜಯ ಸಾಧಿಸಿತು.


ಸೈಲಸ್ ಉಡುಪಿ ಮತ್ತು ಗುರುಕುಲ ವಕ್ವಾಡಿ ತಂಡ ಮೂರನೇ ಸ್ಥಾನ ಪಡೆದುಕೊಂಡರು.

ಫೈನಲ್ ನ ಪಂದ್ಯಶ್ರೇಷ್ಟ ಮತ್ತು ಬೆಸ್ಟ್ ಬ್ಯಾಟರ್ ಪ್ರಶಸ್ತಿ ವೈದಿಕ್ ಶೆಟ್ಟಿ, ಗ್ರೀನ್ ಪಾರ್ಕ್ ನ ಮಾಝಿನ್ ಬೆಸ್ಟ್ ಬೌಲರ್ ಹಾಗೂ ಪವನ್ ಗ್ರೀನ್ ಪಾರ್ಕ್ ಸರಣಿಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

ಬಹುಮಾನ ವಿತರಣಾ ವೇದಿಕೆಯಲ್ಲಿ ರಮೇಶ್ ಶೆಟ್ಟಿ, ಮನೋಜ್ ನಾಯರ್,ಕೆ.ಪಿ ಸತೀಶ್,ನಾರಾಯಣ ಶೆಟ್ಟಿ, ರಾಘವೇಂದ್ರ ಚರಣ್ ನಾವಡ,ನಾರಾಯಣ ಶೆಟ್ಟಿ ಮಾರ್ಕೋಡು,ಭಾಸ್ಕರ ಆಚಾರ್,ನಾಗೇಶ್ ನಾವಡ,
ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ಶಿವನಾರಾಯಣ ಐತಾಳ್ ಕೋಟ,ಟಿ‌.ಸಿ.ಎ ಪದಾಧಿಕಾರಿಗಳು,ಸದಸ್ಯರು ಮತ್ತು ಪಂದ್ಯಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

You cannot copy content from Baravanige News

Scroll to Top