ವಿವಾಹಿತೆಯಿಂದ ಹನಿಟ್ರ್ಯಾಪ್ : ಡೆತ್‍ನೋಟ್ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆ..!

ಮಡಿಕೇರಿ : ಮಹಿಳೆಯೊಬ್ಬಳಿಂದ ಹನಿಟ್ರ್ಯಾಪ್‍ಗೊಳಗಾಗಿ ನಿವೃತ್ತ ಯೋಧನೋರ್ವ ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾದ ಘಟನೆ ನಗರದ ಉಕ್ಕುಡ ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ನಿವೃತ್ತ ಯೋಧನನ್ನು ಸಂದೇಶ್ (40) ಎಂದು ಗುರುತಿಸಲಾಗಿದೆ.

ಮನೆಯ ಸಮೀಪದ ಪಂಪಿನ ಕೆರೆ ಬಳಿ ಸಂದೇಶ್ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೆರೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸಂದೇಶ್ ಫೇಸ್‍ಬುಕ್‍ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಯೊಬ್ಬಳ ಸ್ನೇಹಕ್ಕೆ ಬಿದ್ದು ಆಕೆಯಿಂದಲೇ ಹನಿಟ್ರ್ಯಾಪ್‍ಗೆ ಒಳಗಾಗಿದ್ದಾನೆ. ಆಕೆಯ ಕಾಟ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ್ ಡೆತ್‍ನೋಟ್ ಬರೆದಿಟ್ಟಿದ್ದಾನೆ. ಕೆರೆಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ನ್ಯಾಯ ಕೊಡಿಸುವಂತೆ ಸಂದೇಶ್ ಪತ್ನಿ ಕಣ್ಣೀರು ಹಾಕಿದ್ದಾಳೆ.

ಈ ಸಂಬಂಧ ಮಡಿಕೇರಿ ನಗರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Scroll to Top