Tuesday, July 23, 2024
Homeಸುದ್ದಿಕರಾವಳಿಕಾಲೇಜ್‌ಗೆ ಹೋಗ್ತೆನೆಂದು ಹೋದ ನಂದಳಿಕೆಯ ದೀಪಾ ಮಿಸ್ಸಿಂಗ್..!

ಕಾಲೇಜ್‌ಗೆ ಹೋಗ್ತೆನೆಂದು ಹೋದ ನಂದಳಿಕೆಯ ದೀಪಾ ಮಿಸ್ಸಿಂಗ್..!

ಕಾರ್ಕಳ : ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿಕೊಂಡು ಹೋಗಿದ್ದ ಕಾರ್ಕಳ ನಂದಳಿಕೆಯ ಯುವತಿ ಕಾಣೆಯಾಗಿದ್ದಾಳೆ.



ನಂದಳಿಕೆ ಗ್ರಾಮದ ಮಾವಿನಕಟ್ಟೆಯ ದೀಪಾ (21) ಕಾಣೆಯಾಗಿರುವ ಕಾಲೇಜ್ ವಿದ್ಯಾರ್ಥಿನಿ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಪಾ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಎ. ವಿದ್ಯಾಭ್ಯಾಸ ಮಾಡುತ್ತಿದ್ದು, ನ. 6 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದಾಳೆ, ಆದ್ರೆ ಕಾಲೇಜಿಗೂ ಹೋಗದೆ ಅತ್ತ ವಾಪಾಸು ಮನೆಗೂ ಬಾರದೇ ಜೊತೆಗೆ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ.

ಈ ಬಗ್ಗೆ ದೀಪಾಳ ಅಣ್ಣ ದಿಲೀಪ್‌ ಪೂಜಾರಿ ನೀಡಿದ ಮಾಹಿತಿಯಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News