ಮೂಡುಬಿದಿರೆ ಪೊಲೀಸ್ ಕಾರ್ಯಾಚರಣೆ : ಇಬ್ಬರು ಬೈಕ್‌ ಕಳ್ಳರ ಬಂಧನ

ಮೂಡುಬಿದಿರೆ : ಬೈಕ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಸಮೀಪದ ಕೊಂಡೆ ಬೀದಿಯಲ್ಲಿ ಬಂಧಿಸಿದ್ದಾರೆ.



ಮೂಡುಬಿದಿರೆ ತಾಲೂಕಿನ ಇಡಾ ಕೋಟೆಬಾಗಿಲು ನಿವಾಸಿ ಸೈಯದ್ ಜಾಕೀರ್ (20) ಮತ್ತು ಕೋಟೆಬಾಗಿಲು ಗ್ರಾಮದ ದರ್ಗಾ ರಸ್ತೆ ನಿವಾಸಿ ಮೊಹಮ್ಮದ್ ಶಹೀಂ (24) ಸೆರೆಯಾಗಿರುವ ಕಳ್ಳರು.

ಆರೋಪಿಗಳ ಬಳಿಯಿದ್ದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ ಕಳ್ಳತನ ಮಾಡಲಾಗಿದೆ ಎಂದು ಬಾಯಿ ಬಿಟ್ಟಿದ್ದಾರೆ. ಜೈನ ಪೇಟೆಯ ಬಡಗ ಬಸದಿಯ ಎದುರು ಇರುವ ದೇವಿ ಕೃಪಾ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಪ್ರದೇಶದಿಂದ ಕಳ್ಳತನ ಮಾಡಿದ್ದರು.

ಮಾರ್ಪಾಡಿ ಗ್ರಾಮದಲ್ಲಿರುವ ಎವರ್‌ಪ್ರೈಸ್ ರೆಸಿಡೆನ್ಸ್ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಿಂದ ಇನ್ನೊಂದು ಬೈಕ್‌ ಕದ್ದಿದ್ದರು. ಈ ಬೈಕನ್ನು ಪೇಪರ್ ಮಿಲ್ ಬಳಿಯ ಕೀರ್ತಿನಗರ ಕ್ರಾಸ್‌ನಲ್ಲಿ ಪೊದೆಗಳಲ್ಲಿ ಬಚ್ಚಿಟ್ಟಿರುವುದಾಗಿ ಆರೋಪಿಗಳು ತಿಳಿಸಿದ್ದು, ಪೊಲೀಸರು ಈ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಎರಡು ಬೈಕ್‌ಗಳ ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

You cannot copy content from Baravanige News

Scroll to Top