Saturday, July 27, 2024
Homeಸುದ್ದಿಅಮೆರಿಕಾದ ಅಟ್ಲಾಂಟಾದಲ್ಲಿ ಶ್ರೀಕೃಷ್ಣ ಮಂದಿರಕ್ಕೆ ಭೂಮಿಪೂಜೆ

ಅಮೆರಿಕಾದ ಅಟ್ಲಾಂಟಾದಲ್ಲಿ ಶ್ರೀಕೃಷ್ಣ ಮಂದಿರಕ್ಕೆ ಭೂಮಿಪೂಜೆ

ಉಡುಪಿ, ನ 07: ವಿಶ್ವಾದ್ಯಂತ ಶ್ರೀಕೃಷ್ಣಭಕ್ತಿ ಪ್ರಸಾರ ದೀಕ್ಷೆಯನ್ನು ಹೊಂದಿರುವ ಪೂಜ್ಯ ಪುತ್ತಿಗೆ ಶ್ರೀಪಾದರು ಅಮೇರಿಕಾದ ಅಟ್ಲಾಂಟಾ ನಗರದಲ್ಲಿ ಭಕ್ತ ಜನರ ಸಹಕಾರದೊಂದಿಗೆ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕಾಗಿ ಖರೀದಿಸಿರುವ 6 ಎಕ್ರೆಯ ವಿಶಾಲವಾದ ಜಾಗದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದರು.

ಈ ಜಾಗದಲ್ಲಿ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣವಾಗಲಿದ್ದು , ಶ್ರೀಪಾದರು ಉಡುಪಿ ಶ್ರೇಕೃಷ್ಣನ ಪರ್ಯಾಯ ಮುಗಿಸಿ ಮರಳಿ ಬರುವಷ್ಟರಲ್ಲಿ ಶ್ರೀಕೃಷ್ಣ ಪ್ರತಿಷ್ಠೆಯ ಮೂಲಕ ಮಂದಿರದ ವಿದ್ಯುಕ್ತ ಉದ್ಘಾಟನೆಯ ಸಂಕಲ್ಪವನ್ನು ಇಲ್ಲಿಯ ಬಕ್ತಜನತೆ ಇರಿಸಿಕೊಂಡಿದ್ದಾರೆ.

ಸಂಕಲ್ಪಿತ ಶ್ರೀಕೃಷ್ಣ ಮಂದಿರದ ಗರ್ಭಗುಡಿಯ ಕೆಳಗೆಡೆ 700 ಶ್ಲೋಕ ಗಳನ್ನು ಕೆತ್ತಿಸಿದ ಇಟ್ಟಿಗೆಗಳನ್ನು ಭಕ್ತರ ಹೆಸರಿನಲ್ಲಿ ಇರಿಸಲಾಗುವುದು. ಈ ಮೂಲಕ ಪುತ್ತಿಗೆ ಶ್ರೀಗಳ ಕೋಟಿಗೀತಾ ಲೇಖನ ಯೋಜನೆಯ ಸ್ಮಾರಕವಾಗಿ ಅಮೇರಿಕಾದಲ್ಲಿ ಈ ಮಂದಿರ ಮೂಡಿ ಬರಲಿದೆ .

ಪೂಜ್ಯ ಶ್ರೀಗಳು ಅಮೇರಿಕಾದಲ್ಲಿ ಸ್ಥಾಪಿಸಿರುವ 11 ಮಠಗಳಲ್ಲಿ ಇದು ಆರನೆಯ ಶಾಖಾ ಮಠವಾಗಿದ್ದು ಇದೀಗ ಸಣ್ಣ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಭೂಮಿ ಪೂಜೆಯ ವೈದಿಕ ಕಾರ್ಯಕ್ರಮಗಳನ್ನು ಉಡುಪಿಯ ಹೆರ್ಗ ವೇದವ್ಯಾಸ ಭಟ್ ರವರು ನೆರವೇರಿಸಿದರು .ಮಠದ ಪ್ರಧಾನ ಅರ್ಚಕರಾದ ಜಯ ಪ್ರಸಾದ್ ಅಮ್ಮಣ್ಣಾಯ ಮುಂದಾಳುತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯ ವಿವರವನ್ನು ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ರವರು ವಿವರಿಸಿದರು .ವಿದ್ವಾನ್ ಕೇಶವ ರಾವ್ ತಡಿಪಾತ್ರಿ , ಬಾಲಕೃಷ್ಣ ಭಟ್ , ಹರೀಶ್ ಭಟ್ ಅಜಯ್ ,ಮುರಳಿ ,ಶ್ರೀಕಾಂತ್ ಮೊದಲಾಗಿ ನೂರಾರು ಭಕ್ತಜನರು ಈ ಐತಿಹಾಸಿಕ ಭೂಮಿಪೂಜಾ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News