ವಸತಿ ಸಮುಚ್ಚಯದ ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾದ ಬಾಲಕಿ

ಮಣಿಪಾಲ: ಮಾನಸಿಕ ಖಿನ್ನತೆಯಿಂದ ಬಾಲಕಿಯೊಬ್ಬಳು ವಸತಿ ಸಮುಚ್ಚಯದ ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆರ್ಗಾ ಗ್ರಾಮದ ಸರಳೇಬೆಟ್ಟುವಿನಲ್ಲಿ ನ.5ರಂದು ನಡೆದಿದೆ.

ಮೃತರನ್ನು ಸರಳೇಬೆಟ್ಟು ಹೈಪಾಯಿಂಟ್ ಹೈಟ್ಸ್ ವಸತಿ ಸಮುಚ್ಚಯದ ನಿವಾಸಿ ಕೃತಿಕಾ ಎಂಬವರ ಮಗಳು ಪ್ರಜ್ಞಾ (13) ಎಂದು ಗುರುತಿಸಲಾಗಿದೆ.

ಜೀವನದಲ್ಲಿ ಜಿಗುಪ್ಪೆಗೊಂಡು ಪ್ರಜ್ಞಾ ಎಂಟನೇ ಮಹಡಿಯ ಬಾಲ್ಕನಿಯಿಂದ ಹಾರಿದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top