Wednesday, May 29, 2024
Homeಸುದ್ದಿಮದುವೆಯಾಗಿ 19 ದಿನಗಳಲ್ಲೇ ನೇಣಿಗೆ ಶರಣಾದ ನವ ವಧು

ಮದುವೆಯಾಗಿ 19 ದಿನಗಳಲ್ಲೇ ನೇಣಿಗೆ ಶರಣಾದ ನವ ವಧು

ಕಾಸರಗೋಡು : ಕಾಸರಗೋಡಿನಲ್ಲಿ ನವವಿವಾಹಿತೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉಕ್ಕಿನಡ್ಕ ಮುಹಮ್ಮದ್ ಮತ್ತು ಬೀಫಾತಿಮಾ ದಂಪತಿಯ ಪುತ್ರಿ ಹಾಗೂ ಉಕ್ಕಿನಡ್ಕ ತಾಜುದ್ದೀನ್ ಎಂಬವರ ಪತ್ನಿ ಉಮೈರಾ ಬಾನು (22) ನೇಣಿಗೆ ಶರಣಾದ ಯುವತಿಯಾಗಿದ್ದಾಳೆ.

ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಉಮೈರಾ ಬಾನು ಪತ್ತೆಯಾಗಿದ್ದಾರೆ. ತಾಜುದ್ದೀನ್ ಮತ್ತು ಉಮೈರಾ ಬಾನು ಪರಸ್ಪರ ಪ್ರೀತಿಸುತ್ತಿದ್ದರು. ತಾಜುದ್ದೀನ್ ಒಂದು ತಿಂಗಳ ಹಿಂದೆ ಗಲ್ಫ್ ನಿಂದ ಬಂದಿದ್ದು 19 ದಿನಗಳ ಹಿಂದೆ ಉಮೈರಾ ಅವರನ್ನು ವಿವಾಹವಾಗಿದ್ದರು. ಉಮೈರಾ ಅವರ ತಂದೆ ಮಹಮ್ಮದ್ ಕರ್ನಾಟಕದವರು. ಮಹಮ್ಮದ್ ಮತ್ತು ಅವರ ಕುಟುಂಬ ನಿನ್ನೆ ಬೆಳಗ್ಗೆ ಕರ್ನಾಟಕಕ್ಕೆ ತೆರಳಿದ್ದರು. ಮನೆಯಲ್ಲಿ ಉಮೈರಾ ಮತ್ತು ತಾಜುದ್ದೀನ್ ಮಾತ್ರ ಇದ್ದರು. ತಾಜುದ್ದೀನ್ ಅವರ ಸಂಬಂಧಿ ಹೊಸ ಮನೆ ಕಟ್ಟುತ್ತಿದ್ದಾರೆ. ತಾಜುದ್ದೀನ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಸಿಮೆಂಟ್ ಇಳಿಸಲು ಸಂಬಂಧಿಕರ ಮನೆಗೆ ಹೋಗಿದ್ದರು. ತಾಜುದ್ದೀನ್ ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಬಾಗಿಲನ್ನು ಒಳಗಿನಿಂದ ಚಿಲಕ ಹಾಕಿ ಮುಚ್ಚಲಾಗಿತ್ತು. ಬಾಗಿಲು ಬಡಿದರೂ ತೆರೆಯದೇ ಇದ್ದಾಗ ಬಾಗಿಲು ಒದ್ದು ನೋಡಿದಾಗ ಉಮೈರಾ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಶಾಲನ್ನು ಕತ್ತರಿಸಿ ಕೂಡಲೇ ಉಕ್ಕಿನಡ್ಕ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಬದಿಯಡ್ಕ ಪೊಲೀಸರು ಪಂಚನಾಮೆ ನಡೆಸಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ತಜ್ಞ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಕೆಲವು ದಿನಗಳಿಂದ ಉಮೈರಾ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News