Saturday, July 27, 2024
Homeಸುದ್ದಿಉಡುಪಿ: ಲಕ್ಷಾಂತರ ಮೌಲ್ಯದ ಸರ ಕಳವು; ಆರೋಪಿ ಅರೆಸ್ಟ್..!

ಉಡುಪಿ: ಲಕ್ಷಾಂತರ ಮೌಲ್ಯದ ಸರ ಕಳವು; ಆರೋಪಿ ಅರೆಸ್ಟ್..!

ಉಡುಪಿ, ನ.04: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಪಾವಂಜೆ ರಸ್ತೆಯಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಸರ ಸುಲಿಗೆ ಮಾಡಲು ಪ್ರಯತ್ನಿಸಿದ ಮತ್ತು ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಎಂಬಲ್ಲಿ ಮಹಿಳೆಯ ಕುತ್ತಿಗೆಯಿಂದ ಸರ ಸುಲಿಗೆ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದು ಲಕ್ಷಾಂತರ ಮೌಲ್ಯದ ಚಿನ್ನದ ಹವಳದ ಸರ ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಮಂಗಳೂರು ಮಾಲೇಮಾರ್ ಬಳಿ ವಾಸ್ತವ್ಯವಿರುವ ಮೂಲತಃ ಕೈಕಂಬ ಮಳಲಿ ನಿವಾಸಿ ವಿನಯ ಪ್ರಸಾದ್(30) ಎಂದು ಗುರುತಿಸಲಾಗಿದೆ.

ಕಳೆದ ಅ. 14ರಂದು ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾವಂಜೆ ಗ್ರಾಮದ ಪಾವಂಜೆಯಿಂದ ಹಳೆಯಂಗಡಿ ಕಡೆಗೆ ಹೋಗುವ ಒಳ ರಸ್ತೆಯಲ್ಲಿ ಲೀಲಾ ಎಂಬವರ ಕುತ್ತಿಗೆಯಲ್ಲಿದ್ದ ಸರವನ್ನು ಯಾರೋ ಅಪರಿಚಿತ ವ್ಯಕ್ತಿ ಸುಲಿಗೆ ಮಾಡಲು ಪ್ರಯತ್ನಿಸಿದ ಬಗ್ಗೆ ಲೀಲಾ ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯಾದ ವಿನಯ್ ಪ್ರಸಾದ್ ಎಂಬಾತನನ್ನು ಮುಲ್ಕಿ ಪೊಲೀಸರು ನ.2ರಂದು ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದು, ಪೊಲೀಸರು ತೀವ್ರ ತನಿಖೆ ನಡೆಸಿದಾಗ ಆರೋಪಿ ತಾನು ಉಡುಪಿಯ ಕಟಪಾಡಿ ಒಳ ರಸ್ತೆಯಲ್ಲಿ ಕೂಡ ಮಹಿಳೆಯೋರ್ವಳ ಕುತ್ತಿಗೆಯಿಂದ ಸರವನ್ನು ಸುಲಿಗೆ ಮಾಡಿದ ತಿಳಿಸಿದ್ದಾನೆ.

ಅದರಂತೆ ಆರೋಪಿ ಸುಲಿಗೆ ಮಾಡಿದ 43,4 ಗ್ರಾಂ. ತೂಕದ ಚಿನ್ನದ ಹವಳದ ಸರವನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಮಾರ್ಗದರ್ಶನದಂತೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಮನೋಜ್ ಕುಮಾರ್ ರವರ ನೇತೃತ್ವದಲ್ಲಿ ಆರೋಪಿಯಮತ್ತು ಸೊತ್ತು ಪತ್ತೆ ಹಚ್ಚುವಲ್ಲಿ ಮುಲ್ಕಿ ಪೊಲಿಸ್ ಠಾಣೆಯ ಪಿ.ಎ, ವಿದ್ಯಾಧರ ಡಿ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News