Saturday, July 27, 2024
Homeಸುದ್ದಿತುಲಾಭಾರದ ವೇಳೆ ಕಳಚಿ ಬಿದ್ದ ತಕ್ಕಡಿ ಹಗ್ಗ: ಅಪಾಯದಿಂದ ಪಾರದ ಪೇಜಾವರ ಶ್ರೀ

ತುಲಾಭಾರದ ವೇಳೆ ಕಳಚಿ ಬಿದ್ದ ತಕ್ಕಡಿ ಹಗ್ಗ: ಅಪಾಯದಿಂದ ಪಾರದ ಪೇಜಾವರ ಶ್ರೀ

ನವದೆಹಲಿ, ನ 3: ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ 60 ತುಂಬಿದ ಹಿನ್ನೆಲೆಯಲ್ಲಿ ನವದೆಹಲಿಯ ಪೇಜಾವರ ಮಠದಲ್ಲಿ ನಡೆದ ಪ್ರಸನ್ನಾಭಿನಂದನ ಕಾರ್ಯಕ್ರಮದ ವೇಳೆ ಅಚಾತುರ್ಯ ಘಟನೆಯೊಂದು ನಡೆದಿದೆ.

ನವದೆಹಲಿಯಲ್ಲಿರುವ ಸ್ವಾಮೀಜಿಗಳು ಚಾತುರ್ಮಾಸ್ಯ ಕಾರ್ಯಕ್ರಮ ಪೂರ್ಣಗೊಳಿಸಿ ಬಂದಿದ್ದು, ಹೀಗಾಗಿ ಭಕ್ತರು ತುಲಾಭಾರ ಸೇವೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ಶ್ರೀಗಳ ತುಲಾಭಾರಕ್ಕೆ ಭಕ್ತರು ಮುಂದಾಗಿದ್ದಾಗ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ಪರಿಣಾಮ ತಕ್ಕಡಿಯ ಸರಳು ಶ್ರೀಗಳ ತಲೆಯ ಮೇಲೆ ಕಳಜಿ ಬಿದ್ದ ಪರಿಣಾಮ ತಲೆಗೆ ಚಿಕ್ಕ ಗಾಯವಾಗಿದ್ದು, ಸದ್ಯ ಸ್ವಾಮೀಜಿ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ತಕ್ಕಡಿ ಕುಸಿದು ಬೀಳುತ್ತಿದ್ದಂತೆ ಭಕ್ತಾಧಿಗಳು ಆತಂಕಗೊಂಡರು. ಆದರೆ ಕೈ ಸನ್ನೆಯ ಮೂಲಕ ತಮಗೆ ಏನೂ ಆಗಿಲ್ಲ ಎಂದು ನಗುಮುಖದಲ್ಲೇ ಕೈ ಸನ್ನೆ ಮಾಡಿದ್ದಾರೆ. ಇನ್ನು ತಕ್ಷಣ ವೈದ್ಯರು ಸ್ಥಳಕ್ಕೆ ಆಗಮಿಸಿ ಪರೀಕ್ಷಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ ತಕ್ಕಡಿ ತಲೆಯ ಮೇಲೆ ಬಿದ್ದು ಸಣ್ಣ ಗಾಯವಾಗಿತ್ತು. ಈಗ ಗಾಯ ಮಾಸಿದ್ದು, ಆರಾಮವಾಗಿದ್ದೇನೆ. ಭಕ್ತರು ಗಾಬರಿಪಡಬೇಕಾದ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News