Saturday, July 27, 2024
Homeಸುದ್ದಿರಾಜ್ಯ2000 ರೂ. ನೋಟುಗಳ ವಾಪಸ್ ಮಾಡಲು ಕಟ್ಟ ಕಡೆಯ ಅವಕಾಶ : ಆರ್‌ಬಿಐನಿಂದ ಮಹತ್ವದ ಸೂಚನೆ

2000 ರೂ. ನೋಟುಗಳ ವಾಪಸ್ ಮಾಡಲು ಕಟ್ಟ ಕಡೆಯ ಅವಕಾಶ : ಆರ್‌ಬಿಐನಿಂದ ಮಹತ್ವದ ಸೂಚನೆ

ನವದೆಹಲಿ : 2000 ಮುಖಬೆಲೆಯ ನೋಟುಗಳನ್ನು ಹಿಂತಿರುಗಿಸಲು ಗಡುವು ಕೊಟ್ಟಿದ್ದ ಆರ್‌ಬಿಐ ಮತ್ತೊಂದು ಮಹತ್ವದ ಸೂಚನೆ ನೀಡಿದೆ.

ಇದುವರೆಗೂ ಶೇಕಡಾ 97ರಷ್ಟು 2000 ನೋಟುಗಳನ್ನ ಬ್ಯಾಂಕ್‌ಗೆ ವಾಪಸ್ ಮಾಡಲಾಗಿದೆ. ಶೇಕಡಾ 3ರಷ್ಟು ಅಂದ್ರೆ 10,000 ಕೋಟಿ ರೂಪಾಯಿ ಅಷ್ಟು 2 ಸಾವಿರ ಮುಖಬೆಲೆಯ ನೋಟುಗಳನ್ನು ಇನ್ನು ಜನರ ಬಳಿಯೇ ಬಾಕಿ ಇದೆ. ಈ ಬಾಕಿ ಉಳಿದ ನೋಟುಗಳನ್ನು ವಾಪಸ್ ಪಡೆಯಲು ಆರ್‌ಬಿಐ ಮುಂದಾಗಿದೆ.

ಕಳೆದ ಅಕ್ಟೋಬರ್ 7ಕ್ಕೆ 2000 ನೋಟುಗಳನ್ನ ಬ್ಯಾಂಕ್‌ಗಳಿಗೆ ಹಿಂತಿರುಗಿಸಲು ಗಡುವು ಕೊಡಲಾಗಿತ್ತು. ಆ ಗಡುವು ಕೂಡ ಅಂತ್ಯವಾಗಿದೆ. ಇದೀಗ ದೇಶದ 19 ಆರ್‌ಬಿಐ ಶಾಖೆಗಳಲ್ಲಿ ಮಾತ್ರ 2000 ನೋಟುಗಳನ್ನು ವಾಪಸ್ ಮಾಡಲು ಅವಕಾಶವಿದೆ. ಈ ಆರ್‌ಬಿಐ ಶಾಖೆಗಳಲ್ಲಿ ಇದೀಗ ಜನರು ಸಾಲುಗಟ್ಟಿ ನಿಂತು ನೋಟು ಹಿಂತಿರುಗಿಸುತ್ತಿದ್ದಾರೆ. ಇದೀಗ ಆರ್‌ಬಿಐ 2000 ಮುಖಬೆಲೆಯ ನೋಟು ಹಿಂತಿರುಗಿಸಲು ಮತ್ತೊಂದು ಅವಕಾಶವನ್ನು ನೀಡಿದೆ.

ಇಷ್ಟು ದಿನ ಆರ್‌ಬಿಐ ಶಾಖೆಗಳಲ್ಲಿ 2000 ಮುಖಬೆಲೆಯ ನೋಟುಗಳನ್ನು ಹಿಂತಿರುಗಿಸಬಹುದಾಗಿದೆ. ಇದರ ಜೊತೆಗೆ ಸಾರ್ವಜನಿಕರು 2000 ನೋಟುಗಳನ್ನು ಫೋಸ್ಟ್ ಮೂಲಕವೂ ಆರ್‌ಬಿಐಗಳಿಗೆ ಕಳುಹಿಸಬಹುದು. ನೋಟಿನ ಜೊತೆಗೆ ಬ್ಯಾಂಕ್ ಅಕೌಂಟ್ ನಂಬರ್ ದಾಖಲಿಸಿದ್ರೆ ಅವರ ಖಾತೆಗೆ ನೇರವಾಗಿ ಆ ಹಣ ಜಮೆಯಾಗಲಿದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಆರ್‌ಬಿಐ ಹೇಳಿದೆ.

ಈಗಲೂ ಜನರ ಬಳಿ ಇರುವ 2000 ನೋಟನ್ನು ಹಿಂತಿರುಗಿಸಿದ್ರೆ ಆ ನೋಟುಗಳಿಗೆ ಹಣದ ಮೌಲ್ಯವಿದೆ. ಆರ್‌ಬಿಐನ ಈ ಕಡೆಯ ಅವಕಾಶ ಮುಗಿದ ಮೇಲೆ 2000 ಮುಖಬೆಲೆಯ ನೋಟು ಬರೀ ಕಾಗದದ ಪತ್ರವಾಗಲಿದೆ. ಅಷ್ಟೇ ಅಲ್ಲ ಅಪಾರ ಪ್ರಮಾಣದ 2000 ನೋಟು ನಿಮ್ಮ ಹತ್ರ ಇದ್ರೆ ಅದು ಕಾನೂನಿನಲ್ಲಿ ಅಪರಾಧ ಎಂದು ಸಾಬೀತಾದ್ರೆ ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News