ಉರ್ಫಿ ಜಾವೇದ್ ಅರೆಸ್ಟ್; ನಟಿಯ ಎರಡೂ ಕೈಹಿಡಿದು ಎಳೆದೊಯ್ದ ಪೊಲೀಸ್..!

ಸೋಶಿಯಲ್ ಮೀಡಿಯಾದಲ್ಲಿ ನಟಿ ಉರ್ಫಿ ಜಾವೇದ್ ಆಗಾಗ ಟ್ರೆಂಡಿಂಗ್ನಲ್ಲಿರ್ತಾರೆ. ಅವರು ತೊಡುವ ಉಡುಗೆ, ತೊಡುಗೆಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅದರಂತೆ ಇದೀಗ ಮತ್ತೊಮ್ಮೆ ಉರ್ಫಿ ಹೆಡ್ಲೈನ್ ಆಗಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಉರ್ಫಿ, ರೆಸ್ಟೋರೆಂಟ್ ಮುಂದೆ ನಿಂತಿದ್ದಾರೆ. ಅಲ್ಲಿಗೆ ಬರುವ ಇಬ್ಬರು ಮಹಿಳಾ ಪೊಲೀಸರು ಅವರ ಜೊತೆ ಮಾತುಕತೆಯಲ್ಲಿ ಬ್ಯುಸಿ ಆಗುತ್ತಾರೆ. ನಂತರ ಅಧಿಕಾರಿಗಳು ಅವರನ್ನು ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಈ ಮೂಲಕ ಉರ್ಫಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಹರಡಿದೆ.

ಆದರೆ ಅವರ ಕೆಲವು ಅಭಿಮಾನಿಗಳು, ಇದು ಬಂಧನ ಆಗಿರೋದಲ್ಲ. ಸ್ಕ್ರಿಪ್ಟೆಟ್ ಇದ್ದಂತೆ ಕಾಣ್ತಿದೆ ಎನ್ನುತ್ತಿದ್ದಾರೆ. ಆದರೆ ಉರ್ಫಿಯನ್ನು ಪೊಲೀಸರು ಕರೆದುಕೊಂಡು ಹೋಗಿರೋದಕ್ಕೆ ಇಲ್ಲಿಯವರೆಗೆ ಯಾವುದೇ ಕಾರಣ ತಿಳಿದುಬಂದಿಲ್ಲ. ಇತ್ತೀಚೆಗೆ ಮುಂಬೈನ ಠಾಣೆಯಲ್ಲಿ ಜಾವೇದ್ ವಿರುದ್ಧ ದೂರು ದಾಖಲಾಗಿತ್ತು. ಸಾರ್ವಜನಿಕ ವಲಯದಲ್ಲಿ ಅವರು ತೊಡುತ್ತಿರುವ ಬಟ್ಟೆಗಳಿಗೆ ಸಂಬಂಧಿಸಿ ಕೇಸ್ ದಾಖಲಾಗಿತ್ತು. ಇದೇ ವಿಚಾರಕ್ಕೆ ಉರ್ಫಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

You cannot copy content from Baravanige News

Scroll to Top