Saturday, July 27, 2024
Homeಸುದ್ದಿರಾಜ್ಯಕರ್ನಾಟಕದಲ್ಲಿ ಮತ್ತೊಂದು ವೈರಸ್ ಕಂಟಕವಾಗುವ ಆತಂಕ, ಅಲರ್ಟ್ : ಕೊರೋನಾ ಲಕ್ಷಣಗಳನ್ನೇ ಹೊಂದಿರುವ ಝೀಕಾ, ಇದರ...

ಕರ್ನಾಟಕದಲ್ಲಿ ಮತ್ತೊಂದು ವೈರಸ್ ಕಂಟಕವಾಗುವ ಆತಂಕ, ಅಲರ್ಟ್ : ಕೊರೋನಾ ಲಕ್ಷಣಗಳನ್ನೇ ಹೊಂದಿರುವ ಝೀಕಾ, ಇದರ ಲಕ್ಷಣಗಳೇನು?

ಕೊರೊನಾ ಆರ್ಭಟ, ನಿಫಾ ಕಾಟ ಹೊಸ ವೈರಸ್ಗಳ ಓಡಾಟ ನಿಲ್ತಾನೇ ಇಲ್ಲ. ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎನ್ನುವಂತೆ ಒಂದಲ್ಲ ಒಂದು ವೈರಸ್ಗಳು ಭೀತಿ ಹುಟ್ಟಿಸ್ತಿವೆ. ದಿನೇ ದಿನೇ ದಶಾವತಾರ ಎತ್ತಿ ಜನರಿಗೆ ಕರಾಳ ದರ್ಶನ ನೀಡ್ತಿವೆ. ಮತ್ತೆ ಮತ್ತೆ ಅಬ್ಬರಿಸುತ್ತಾ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿವೆ.

2019ರಲ್ಲಿ ಆರಂಭವಾಗಿದ್ದ ಕೋವಿಡ್ ಬಳಿಕ ಒಮಿಕ್ರಾನ್, ನಿಫಾನಂತಹ ವೈರಸ್ಗಳ ಆಟಕ್ಕೆ ತಲ್ಲಣಿಸಿದ್ದ ದೇಶವಾಸಿಗಳು ಎಲ್ಲಾ ಮುಗೀತು ಅಂತ ನಿಟ್ಟಿಸಿರು ಬಿಡುತ್ತಿರುವಾಗಲೇ ಇಲ್ಲ ನಾನಿದ್ದೀನಿ ಅಂತ ತೋರಿಸ್ತಿವೆ ಕೊರೊನಾ ಉಪತಳಿಗಳು. ಕರ್ನಾಟಕದಲ್ಲಿ ಮತ್ತೊಂದು ವೈರಸ್ ಕಂಟಕವಾಗುವ ಆತಂಕ ಎದುರಾಗಿದೆ.

ಶಿಡ್ಲಘಟ್ಟದ 6 ಗ್ರಾಮಗಳಲ್ಲಿ ಆತಂಕದ ವಾತಾವರಣ!

ಕೆಲ ದಿನಗಳ ಹಿಂದಷ್ಟೇ ಕೇರಳದ ಕೋಝಿಕೋಡ್‌ನಲ್ಲಿ ಪತ್ತೆಯಾಗಿ ಆತಂಕ ಮೂಡಿಸಿದ್ದ ಝೀಕಾ ವೈರಸ್‌ ಈಗ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಇತ್ತೀಚೆಗೆ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಸೊಳ್ಳೆಗಳನ್ನ ಪರೀಕ್ಷೆಗೆ ಒಳಪಡಿಸಿದಾಗ ವೈರಸ್ ಇರೋದು ದೃಢವಾಗಿದೆ. ಹೀಗಾಗಿ ತಲಕಾಯಲಬೆಟ್ಟ ಗ್ರಾಮ ಸೇರಿದಂತೆ ಸುತ್ತಮುತ್ತಲ 5 ಕಿ.ಮೀ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ ಚೆಕಪ್‌ ಮಾಡಲಾಗ್ತಿದೆ. 6 ಗ್ರಾಮಗಳ ಸುಮಾರು 888 ಮನೆಗಳು ಹಾಗೂ 4,282 ಜನರಲ್ಲಿ ಆತಂಕ ಶುರುವಾಗಿದೆ.

ಡೇಂಜರಸ್ ‘ಝೀಕಾ’

ರಾಜ್ಯದಲ್ಲಿ ಮೊದಲ ಬಾರಿಗೆ ‘ಝೀಕಾ’ ಪತ್ತೆ

ಈಡಿಸ್ ಸೊಳ್ಳೆ ಕಡಿತದಿಂದ ವೈರಸ್ ಸೋಂಕು

ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿ ಆತಂಕ

ಈವರೆಗೂ ಮಾನವರಲ್ಲಿ ಸೋಂಕು ಪತ್ತೆಯಾಗಿಲ್ಲ

33 ಜನರ ರಕ್ತದ ಮಾದರಿ ಬೆಂಗಳೂರಿಗೆ ಶಿಫ್ಟ್

6 ಗ್ರಾಮ, 888 ಮನೆ, 4,282 ಜನರಿಗೆ ಸ್ಕ್ರೀನಿಂಗ್

4 ಜನರಲ್ಲಿ ಜ್ವರ ಪತ್ತೆ.. ರಕ್ತದ ಸ್ಯಾಂಪಲ್ ಪರೀಕ್ಷೆ

60 ತಂಡಗಳಿಂದ 5 ಗ್ರಾಮಗಳಲ್ಲಿ ತೀವ್ರ ನಿಗಾ

ಕೊರೋನಾ ಲಕ್ಷಣಗಳನ್ನೇ ಹೊಂದಿರುವ ಝೀಕಾ ವೈರಸ್ ಜನರ ದೇಹ ಹೊಕ್ಕಿದ ಬಳಿಕ ಸಾಮಾನ್ಯ ಲಕ್ಷಣಗಳ ಮೂಲಕ ಕಾಣಿಸಿಕೊಳ್ಳುತ್ತೆ.

‘ಝೀಕಾ’ ಲಕ್ಷಣ

ಜನರ ದೇಹದ ಮೇಲೆ ಈಡಿಸ್ ಸೊಳ್ಳೆ ದಾಳಿ ಮಾಡಿದ ಬಳಿಕ ಸಾಮಾನ್ಯವಾಗಿ ಜ್ವರ ಕಾಣಿಸಿಕೊಳ್ಳುತ್ತೆ. ಜ್ವರದ ಜೊತೆ ಕೆಮ್ಮು ಸಹ ಕಾಣಿಸಿಕೊಂಡು ದಿನೇ ದಿನೇ ಕೆಮ್ಮಿನ ತೀವ್ರತೆ ಹೆಚ್ಚಾಗುತ್ತಾ ಹೋಗುತ್ತೆ. ಅಲ್ಲದೇ ಚರ್ಮದ ಮೇಲೆ ದದ್ದು ಸಹ ಕಾಣಿಸಿಕೊಳ್ಳುತ್ತೆ. ಜೊತೆಗೆ ಮಾಂಸ ಖಂಡಗಳ ಸೆಳೆತ ಮತ್ತು ಮೈ ಕೈ ನೋವು ಸಹ ಜನರನ್ನ ಭಾದಿಸುತ್ತೆ.

ಝೀಕಾ ವೈರಸ್ ಸಂಬಂಧ ಗೈಡ್ಲೈನ್ಸ್ ಬಿಡುಗಡೆ!

ರಾಜ್ಯದಲ್ಲಿ ಝೀಕಾ ವೈರಸ್ ಆತಂಕ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿ ಏನೇನಿದೆ ಅಂತ ನೋಡೋದಾದ್ರೆ…

ಝೀಕಾ ಗೈಡ್ಲೈನ್ಸ್!

ನೀರು ಶೇಖರಣಾ ಪರಿಕರಗಳನ್ನು ಮುಚ್ಚಳದಿಂದ ಮುಚ್ಚಿಡಿ.

ಮನೆಗಳ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ.

ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.

ಮಲಗುವಾಗ ಆದಷ್ಟು ಸೊಳ್ಳೆಪರದೆ, ಸೊಳ್ಳೆ ನಿರೋಧಕ ಬಳಸಿ.

ಝೀಕಾ ರೋಗ ಲಕ್ಷಣಗಳು 2 ರಿಂದ 7 ದಿನಗಳವರೆಗೆ ಇರುತ್ತವೆ.

ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆಯನ್ನ ವಹಿಸಬೇಕು.

ಯಾವುದೇ ರೋಗ ಲಕ್ಷಣ ಕಂಡುಬಂದ್ರೆ ವೈದ್ಯರನ್ನು ಸಂಪರ್ಕಿಸಿ.

‘ಸೊಳ್ಳೆಯಿಂದ ದೂರ ಇರಿ.. ಸ್ವಚ್ಛತೆಯನ್ನ ಕಾಪಾಡಿಕೊಳ್ಳಿ’

ಇನ್ನು ಝೀಕಾ ವೈರಸ್ ಪತ್ತೆಯಾದ ಬಳಿಕ 6 ಗ್ರಾಮಗಳಲ್ಲಿ ಹೈಲರ್ಟ್ ಮಾಡಲಾಗಿದೆ.. ಮನುಷ್ಯರಿಗೆ ಝೀಕಾ ವೈರಸ್ ಪತ್ತೆಯಾಗಿಲ್ಲದಿದ್ರೂ ಸೋಂಕಿನ ಲಕ್ಷಣ ಇರುವವರ ರಕ್ತದ ಸ್ಯಾಂಪಲ್ಸ್ ಪಡೆಯಲಾಗಿದೆ. 6 ಗ್ರಾಮಗಳ ಮೇಲೆ ವೈದ್ಯಾಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ತೀವ್ರ ನಿಗಾ ವಹಿಸಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಅಂತ ಚಿಕ್ಕಬಳ್ಳಾಪುರ ಡಿಹೆಚ್ಓ ಡಾ.ಎಸ್.ಎಸ್ ಮಹೇಶ್ ಹೇಳಿದ್ದಾರೆ.

ಝೀಕಾ ವೈರಸ್ನ ಮೂಲ ಸೊಳ್ಳೆಯಾಗಿದ್ದು ಸ್ವಚ್ಚತೆ ಕಡೆಗೆ ಗಮನ ಹರಿಸಬೇಕಿದೆ. ಸೊಳ್ಳೆ ಕಡಿತದಿಂದ ಪಾರಾಗಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಒಂದಾದ ಮೇಲೆ ಒಂದರಂತೆ ಮನುಷ್ಯರ ಮೇಲೆ ದಾಳಿ ನಡೆಸುತ್ತಿರೋ ವೈರಸ್ಗಳು ಚೆಲ್ಲಾಟ ಆಡ್ತಿವೆ. ಕೋವಿಡ್ನಂತೆ ಝೀಕಾವನ್ನು ಕೂಡ ಕಟ್ಟಿಹಾಕಲು ಎಲ್ಲರೂ ಪಣತೊಡಬೇಕಿದೆ. ಭಯಪಡದೇ ಎಲ್ಲರೂ ಎಚ್ಚರಿಕೆ ವಹಿಸುವ ಅಗತ್ಯವಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News