ಅಶ್ಲೀಲ ಫೋಟೋ ಕಳಿಸಿ ಹಣಕ್ಕೆ ಡಿಮ್ಯಾಂಡ್.. ಕೆಲಸಕ್ಕಾಗಿ ವಿದೇಶಕ್ಕೆ ಹೋಗೋರು ಓದಲೇಬೇಕು!

ಚಿಕ್ಕಮಗಳೂರು : ಕಾಂಬೋಡಿಯಾದಲ್ಲಿ ಕನ್ನಡಿಗ ಚೀನಿ ಆ್ಯಪ್ ಮಾಫಿಯಾ ಸಂಕಷ್ಟಕ್ಕೆ ಸಿಲುಕವಂತಾಗಿದೆ. ಈ ವಿಚಾರ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ.

ಹೌದು., ಕಳೆದ ಮೂರು ತಿಂಗಳ ಹಿಂದೆ ಕಾಂಬೋಡಿಯಾಕ್ಕೆ ಜಿಲ್ಲೆಯ‌ ಎನ್.ಆರ್ ಪುರ‌‌ ತಾಲೂಕಿನ ಮಹಲ್ಗೋಡು ಮೂಲದವನಾದ ಅಶೋಕ್, ಕೆಸಿನೋ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಆದ್ರೆ ಕೆಸಿನೋದಲ್ಲಿ ಕೆಲಸ ಬದಲು ಚೀನಿ ಆ್ಯಪ್ನಲ್ಲಿ ಅಶೋಕ್ ಕೆಲಸ ನಿರ್ವಹಿಸುತ್ತಿದ್ದು, ಕನ್ನಡಿಗರ ಫೇಸ್ಬುಕ್ ಇನ್‌ಸ್ಟಾಗ್ರಾಂ ಹ್ಯಾಕ್‌ ಮಾಡಿ ಅಶ್ಲೀಲ ಫೋಟೋ ಕಳಿಸಿ ಬ್ಲಾಕ್‌ಮೇಲ್ ಮಾಡಲಾಗ್ತಿತ್ತು.

ಅಶೋಕ್ ಚೀನಿ ಆ್ಯಪ್ ನೀಡಿದ ಟಾರ್ಗೆಟ್ ರಿಚ್ ಮಾಡದ ಹಿನ್ನೆಲೆ ಹಣಕ್ಕಾಗಿ ಹಿಂಸೆ ನೀಡ್ತಿದ್ದಾರೆ. ಮತ್ತೆ ಭಾರತಕ್ಕೆ ವಾಪಸ್ ಕಳಿಸಲು 13 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಅಶೋಕ್ ಜೊತೆ ಹಲವು ಜನ ಕನ್ನಡಿಗರು ಸಿಲುಕಿರುವ ಶಂಕೆ ಇದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಅಶೋಕ್ ಕುಟುಂಬಸ್ಥರು ದೂರು ಕೊಟ್ಟು ಅಶೋಕ್‌ನನ್ನು ವಾಪಸ್ ಕರೆಸುವಂತೆ ಮನವಿ ಮಾಡಿದ್ದಾರೆ.

You cannot copy content from Baravanige News

Scroll to Top