Saturday, July 27, 2024
Homeಸುದ್ದಿಹಕ್ಕಿ ರೂಪದಲ್ಲಿ ಪ್ರಸಾದ ಕರುಣಿಸಿದ ಗುಳಿಗ ದೈವ; ದೈವೀ ಶಕ್ತಿಯ ವೀಡಿಯೋ ವೈರಲ್

ಹಕ್ಕಿ ರೂಪದಲ್ಲಿ ಪ್ರಸಾದ ಕರುಣಿಸಿದ ಗುಳಿಗ ದೈವ; ದೈವೀ ಶಕ್ತಿಯ ವೀಡಿಯೋ ವೈರಲ್

ಮಂಗಳೂರು, ನ.01: ತುಳುನಾಡಿನಲ್ಲಿ ದೈವೀ ಶಕ್ತಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ರೂಪದಲ್ಲಿ ಶಕ್ತಿ ಕಾರ್ಣಿಕವನ್ನು ತೋರಿಸುತ್ತಿದೆ. ಹಾಗೇನೇ ನಗರದ ಪಚ್ಚನಾಡಿಯ ಬಂದಲೆಯಲ್ಲಿ ಅಚ್ಚರಿಯ ಘಟನೆ ನಡೆದಿದೆ.

ತುಳು ರಂಗಭೂಮಿ ನಟ ಸತೀಶ್ ಬಂದಲೆಯವರು ಶ್ರೀಮಂತ ರಾಜಗುಳಿಗ ಕ್ಷೇತ್ರ ಮೂಡುಮನೆಗುತ್ತು ದೈವ ಚಾಕರಿ ಮಾಡುತ್ತಿದ್ದು, ಎಂದಿನಂತೆ ದೈವಕ್ಕೆ ದೀಪಾರತಿ ಮಾಡುವ ವೇಳೆ ವಿಸ್ಮಯಕಾರಿ ಘಟನೆಗೆ ಸಾಕ್ಷಿಯಾಗಿದೆ.

ಗುಳಿಗ ದೈವಕ್ಕೆ ಪೂಜೆ ನಡೆಯುವ ಸಂದರ್ಭ ವಿಸ್ಮಯಕಾರಿಯಾಗಿ ಹಕ್ಕಿಯೊಂದು ಬಂದು ದೈವದ ವಿಗ್ರಹದ ಮೇಲೆ ಕುಳಿತು ಹೂವಿನ ಪ್ರಸಾದ ಕರುಣಿಸಿದೆ.

ಇದು, ಹಕ್ಕಿಯ ರೂಪದಲ್ಲಿ ಬಂದ ಗುಳಿಗ ಹೂವಿನ ಪ್ರಸಾದವನ್ನು ಕರುಣಿಸಿದ್ದಾನೆಂದು ಭಕ್ತರು ನಂಬಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News